22ರಿಂದ ರೈತ ದಸರಾ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.17-ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಕಾರ್ಯಕ್ರಮವನ್ನು ಸೆ. 22ರಿಂದ 24ರವರೆಗೆ ನಗರದ ಜೆ.ಕೆ.ಮೈದಾನದಲ್ಲಿ ಏರ್ಪಡಿಸಲಾಗಿದೆ. ಸೆ.23ರಂದು ಪುರುಷ ಮತ್ತು ರೈತ ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.  ಪುರುಷರಿಗೆ ಗುಂಡು ಎತ್ತುವುದು, ಗೊಬ್ಬರ ಮೂಟೆ ಹೊತ್ತು ನಡೆಯುವ ಸ್ಪರ್ಧೆ ಹಾಗೂ ರೈತ ಮಹಿಳೆಯರಿಗೆ ನಿಂಬೆ ಮತ್ತು ಚಮಚ, ಬಿಂದಿಗೆ ನೀರು ತುಂಬಿ ಎತ್ತಿಕೊಂಡು ಓಡುವ ಸ್ಪರ್ಧೆ, ಸೆ.24ರಂದು ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin