27ಕ್ಕೆ ಉದಯ ಟಿವಿ ಚಾನೆಲ್ ವಿರುದ್ದ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Udaya-TV

ಬೆಂಗಳೂರು,ಮಾ.20- ಉದಯ ನ್ಯೂಸ್ ಚಾನೆಲ್‍ನ್ನು ಮುಚ್ಚಿರುವುದಾಗಿ ತಿಳಿಸಿ ಅದನ್ನು ಇದುವರೆಗೂ ಮುಂದುವರೆಸುತ್ತಿರುವುದನ್ನು ವಿರೋಧಿಸಿ ಇದೇ 26ರಂದು ಉದಯ ಟಿವಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಉದಯ ಟಿವಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಜಿ.ಆರ್.ಶಿವಶಂಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ಅರ್ಹ ಸವಲತ್ತುಗಳನ್ನು ನೀಡದೆ ಸನ್ ನೆಟ್‍ವರ್ಕ್ ಆಡಳಿತ ವರ್ಗ 2017 ಅಕ್ಟೋಬರ್ 24ರಂದು ಚಾನಲ್‍ನ್ನು ಮುಚ್ಚಿರುವುದಾಗಿ ತಿಳಿಸಿ ಇಲ್ಲಿ ಕೆಲಸ ಮಾಡುತ್ತಿದ್ದ 371 ನೌಕರರನ್ನು ವಜಾ ಮಾಡಿತ್ತು. 68 ನೌಕರರಿಗೆ ಇಷ್ಟಬಂದ ರೀತಿಯಲ್ಲಿ ಪರಿಹಾರ ನೀಡಿ ಉಳಿದ ನೌಕರರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಈ ನೌಕರರಿಗೆ ಕಾನೂನಿನ ಪ್ರಕಾರ ನೀಡಬೇಕಾಗಿರುವ ವೇತನ, ತುಟಿಭತ್ಯೆ, ಬೋನಸ್, ಸೇವಾ ಸವಲತ್ತುಗಳನ್ನು ನೀಡದೆ ನಿರಂತರವಾಗಿ ಶೋಷಣೆ ಮಾಡುತ್ತಿರುವುದು ಖಂಡನೀಯ ಎಂದರು.  ನ್ಯೂಸ್ ಚಾನಲ್‍ನ್ನು ಮುಚ್ಚಿರುವುದಾಗಿ ಹೇಳಿ ಇಂದಿಗೂ ಕೂಡ ವಾಣಿಜ್ಯ ರೂಪದಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದು, ಸರ್ವಾಧಿಕಾರಿ ಧೋರಣೆಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಇದನ್ನು ಖಂಡಿಸಿ ಇದೇ 26ರಂದು ಪ್ರತಿಭಟನೆ ನಡೆಸುವುದಾಗಿ ಶಿವಶಂಕರ್ ಎಚ್ಚರಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin