3.25 ಕೋಟಿ ರೂ. ನಿಷೇಧಿತ ಹಳೆ ನೋಟು ವಶ, 10 ಜನರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Old-Notes--01

ಬೆಂಗಳೂರು, ಮೇ 15- ದೇವಸ್ಥಾನ ಬಳಿ ನಿಷೇಧಿತ 500, 1000ರೂ. ಮುಖ ಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ 10 ಜನರನ್ನು ಬಂಧಿಸಿರುವ ಬಸವನಗುಡಿ ಠಾಣೆ ಪೊಲೀಸರು 3.25 ಕೋಟಿ ರೂ. ಮೌಲ್ಯದ ನಿಷೇಧಿತ ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರೀನಿವಾಸ್(43), ಮಹೇಶ್(32), ಪಿ.ಕರುಣಾಕರನ್(48), ಅಬ್ದುಲ್ ಮುಜಿಬ್(40), ನೀಲಕಂಠ(32), ಎಚ್.ಜಿ.ಜಂಭನಗೌಡ(62), ನಾರಾಯಣ(48), ಉದಯಕುಮಾರ್(34), ಕಾರ್ತಿಕ್(32) ಮತ್ತು ಪಿ.ರುದ್ರಕುಮಾರ್(42) ಬಂಧಿತರು.


ಪ್ರರಕಣದಲ್ಲಿ ಭಾಗಿಯಾಗಿದ್ದ ಪ್ರಸಾದ್, ಶಶಿ ಮತ್ತು ರಾಜೇಂದ್ರ ಎಂಬುವರು ದಾಳಿ ವೇಳೆ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವನಗುಡಿ ಠಾಣೆ ವ್ಯಾಪ್ತಿಯ ದೊಡ್ಡಗಣಪತಿ ದೇವಸ್ಥಾನದ ಬಳಿ ನಿಷೇಧಿತ ಹಳೇ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ದಂಧೆಯಲ್ಲಿ ತೊಡಗಿದ್ದ 10 ಜನರನ್ನು ಬಂಧಿಸಿ ಅವರ ಬಳಿಯಿದ್ದ 3.25ಲಕ್ಷ ರೂ. ಮೌಲ್ಯದ ನಿಷೇಧಿತ 500, 1000ರೂ. ಮುಖಬೆಲೆಯ ನೋಟುಗಳನ್ನು ಹಾಗೂ ಓಮ್ನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಡಿಸಿಪಿ ಡಾ.ಶರಣಪ್ಪ ಅವರ ಮಾರ್ಗದರ್ಶನ, ಎಸಿಪಿ ಜಿ.ಎಂ.ಕಾಂತರಾಜ್ ಅವರ ನೇತೃತ್ವದಲ್ಲಿ ಬಸವನಗುಡಿ ಠಾಣೆ ಇನ್ಸ್‍ಪೆಕ್ಟರ್ ಎಸ್.ಡಿ.ಶಶಿಧರ್, ಪ್ರೊಬೆಷನರಿ ಪಿಎಸ್‍ಐ ಪವಿತ್ರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ಅವರು ಶ್ಲಾಘಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin