7ನೇ ಮಹಡಿಯಿಂದ ಜಿಗಿದ ಪತ್ನಿ, ಜುಟ್ಟು ಹಿಡಿದು ರಕ್ಷಿಸಿದ ಪತಿ…! (Video)

ಈ ಸುದ್ದಿಯನ್ನು ಶೇರ್ ಮಾಡಿ

ಶಾನಕ್ಸಿ, ಫೆ.10-ದಂಪತಿ ಜಗಳ ವಿಕೋಪಕ್ಕೆ ಹೋಗಿ ಏಳನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪತ್ನಿಯನ್ನು ಪತಿಯೊಬ್ಬ ಆಕೆಯ ಜಡೆ ಹಿಡಿದು ರಕ್ಷಿಸಿರುವ ಸಿನಿಮೀಯ ಘಟನೆ ಚೀನಾದ ಶಾಂಗ್ಸಿ ಪಟ್ಟಣದಲ್ಲಿ ನಡೆದಿದೆ.   ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸುವ ತನಕ ಮೂರು ನಿಮಿಷಗಳ ಕಾಲ ಪತಿಯು ತನ್ನ ಪತ್ನಿಯ ತಲೆಕೂದಲು ಹಿಡಿದ್ದಿದ್ದರಿಂದ 30 ವರ್ಷದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪೊಲೀಸ್ ಪೇದೆಯೊಬ್ಬರ ಬಳಿಯಿದ್ದ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ನಾವು ತಲುಪಲು ಸ್ವಲ್ಪ ತಡವಾಗಿದ್ದರೂ ಪತಿಯ ಕೈಯಿಂದ ಜಾರಿ ಪತ್ನಿ ಸಾವಿಗೀಡಾಗುತ್ತಿದ್ದಳು. ಆಕೆಯನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Ponnytail

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin