ಬೆಂಗಳೂರಿನ ಉದ್ಯೋಗಿಗಳು ಅಲ್ಪತೃಪ್ತರಂತೆ, ಹೆಚ್ಚು ಸಂಬಳ ನಿರೀಕ್ಷಿಸಲ್ವಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.22- ಅಪೈಸಲ್ ಸಂದರ್ಭದಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಉದ್ಯೋಗಿಗಳು ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಬೆಂಗಳೂರಿನ ಉದ್ಯೋಗಿಗಳು ಇದಕ್ಕೆ ವ್ಯತಿರಿಕ್ತ.

ಇವರಿಗೆ ವೇತನ ಹೆಚ್ಚಳದ ಬಗ್ಗೆ ಹೆಚ್ಚು ನಿರೀಕ್ಷೆ ಇಲ್ಲಎನ್ನುವ ಕುತೂಹಲಕಾರಿ ಅಂಶವು ಭಾರತದ 2ನೇ ಅತಿದೊಡ್ಡ ಜಾಬ್ ಪೋರ್ಟಲ್ ಆದ ಶೈನ್ ಡಾಟ್ ಕಾಮ್ ನಡೆಸಿದ ಸಮೀಕ್ಷೆಯಿಂದ ಹೊರಬಿದ್ದಿದೆ. ನೌಕರಿಯ ಅತಿಯಾದ ಸ್ಪರ್ಧೆಯೇ ಇದಕ್ಕೆ ಕಾರಣವಾಗಿದೆ.

ವಿವಿಧ ಕ್ಷೇತ್ರ ಹಾಗೂ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಉದ್ಯೋಗಿಗಳು ವೇತನ ಹೆಚ್ಚಳದ ಬಗ್ಗೆ ಅತಿ ಕಡಿಮೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಅತಿ ಹೆಚ್ಚು ಸಂಬಳ ನೀಡುವ ಕ್ಷೇತ್ರಗಳಾದ ಬ್ಯಾಂಕಿಂಗ್ , ಫೈನಾಷಿಯಲ್ ಸರ್ವಿಸಸ್ ಹಾಗೂ ಇನ್ಸೂರೆನ್ಸ್, ಇನ್ಫರ್ಮೆಷನ್ ಟೆಕ್ನಾಲಜಿ, ಬಿಪಿಒ ಉದ್ಯೋಗಿಗಳು ಕೂಡ ಕೇವಲ ಶೇ.10ರಷ್ಟು ವೇತನ ಹೆಚ್ಚಳ ನಿರೀಕ್ಷಿಸುತ್ತಾರೆ.

ಬೆಂಗಳೂರು ನಗರದ ಇನ್ಫರ್ಮೆಷನ್ ಟೆಕ್ನಾಲಜಿ ಹಾಗೂ ಇ-ಕಾಮರ್ಸ್ ಕ್ಷೇತ್ರದಲ್ಲಿ ಕೆಲಸ ನಿರೀಕ್ಷೆಯಲ್ಲಿದ್ದರೆ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುವ ದೆಹಲಿಯ ಉದ್ಯೋಗಿಗಳು ಶೇ.20ಕ್ಕಿಂತ ಜಾಸ್ತಿ ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುತ್ತಾರೆ.

ಐದನೇ ಒಂದರಷ್ಟು ಉದ್ಯೋಗಿಗಳು ಕೇವಲ ಶೇ.10ರಷ್ಟು ವೇತನ ಹೆಚ್ಚಳ ಬಯಸುತ್ತಾರೆ. ಆದರೆ ವೇತನ ಹೆಚ್ಚಳ ವಿಚಾರದಲ್ಲಿ ಮುಂಬೈ ಹಾಗೂ ಪುಣೆಯಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ನಿರೀಕ್ಷೆಗಳು ಅತಿ ಹೆಚ್ಚು ಅವರು ಕನಿಷ್ಠ ಶೇ.20ರಷ್ಟು ವೇತನ ಹೆಚ್ಚಳವನ್ನು ಅಪ್ರೈಸಲ್ ಸಂದರ್ಭದಲ್ಲಿ ಬಯಸುತ್ತಾರೆ ಎಂದು ಶೈನ್ ಡಾಟ್‍ಕಾಮ್ ಇಸಿಒ ಝೈರುಸ್ ಮಾಸ್ಟರ್ ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin