ತಾರೆಯರ ಮತೋತ್ಸಾಹ, ವೋಟ್ ಹಾಕಿ ಪೋಸ್ ಕೊಟ್ಟ ಬಾಲಿವುಡ್ ನಟ-ನಟಿಯರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಏ.29- ಲೋಕಸಭಾ ಚುನಾವಣೆ ನಾಲ್ಕನೆ ಹಂತದ ಮತದಾನ ತಾರಾ ಮೆರುಗಿನಿಂದ ವಿಶೇಷತೆಯಿಂದ ಕೂಡಿತ್ತು. ಮಹಾರಾಷ್ಟ್ರದಲ್ಲಿ ಇಂದು ನಡೆದ ಲೋಕಸಭಾ ಚುನಾವಣೆಗೆ ಬಹುತೇಕ ಬಾಲಿವುಡ್ ತಾರೆಯರು ತಮ್ಮ ಹಕ್ಕುಗಳನ್ನು ಚಲಾಯಿಸಿ ಪ್ರಜಾಪ್ರಭುತ್ವ ಹಬ್ಬಕ್ಕೆ ಸ್ಟಾರ್ ಸ್ಪರ್ಶ ನೀಡಿದರು.

ಮುಂಬೈನ ವಿವಿಧೆಡೆ ಇಂದು ಬೆಳಿಗ್ಗೆ ಅಮೀರ್ ಖಾನ್,ಪ್ರಿಯಾಂಕಾ ಚೋಪ್ರಾ, ರೇಖಾ, ಊರ್ಮಿಳಾ ಮಾತೋಂಡ್ಕರ್, ಮಾಧುರಿ ದಿಕ್ಷಿತ್,ಲಾರಾದತ್ತ, ಪ್ರಿಯಾದತ್ತ, ಆರ್.ಮಾದವನ್ ಸೇರಿದಂತೆ ಅನೇಕ ನಟ-ನಟಿಯರು ಮತದಾನ ಮಾಡಿದ್ದು ವಿಶೇಷವಾಗಿತ್ತು.

ಏಷಿಯಾದ ಅತ್ಯಂತ ಶ್ರೀಮಂತ ಉದ್ಯಮಿ ರಿಲಯನ್ಸ್ ಸಮೂಹ ಸಂಸ್ಥೆಗಳ ಒಡೆಯ ಅನಿಲ್ ಅಂಬಾನಿ ತಮ್ಮ ಪತ್ನಿಯೊಂದಿಗೆ ಮತ ಚಲಾಯಿಸಿದರು. ಒಂಭತ್ತು ರಾಜ್ಯಗಳಲ್ಲಿ ವಿವಿಧ ಪಕ್ಷಗಳ ಮುಖಂಡರು ಮತ್ತು ಖ್ಯಾತನಾಮರು ತಮ್ಮ ಅಮೂಲ್ಯವಾದ ಮತವನ್ನು ಹಾಕಿ ಪ್ರಜಾಪ್ರಭುತ್ವ ದಿನವನ್ನು ಇನಷ್ಟು ಹೆಚ್ಚು ಮಹತ್ವಗೊಳಿಸಿದರು.

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin