Saturday, April 20, 2024
Homeರಾಜಕೀಯಜಿಡಿಎಸ್ ನಲ್ಲಿ ಬಂಡಾಯವಿಲ್ಲ : ಜಿಟಿಡಿ

ಜಿಡಿಎಸ್ ನಲ್ಲಿ ಬಂಡಾಯವಿಲ್ಲ : ಜಿಟಿಡಿ

ಬೆಂಗಳೂರು,ಅ.17-ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯ ಇಲ್ಲ , ಪಕ್ಷ ಎರಡು ಭಾಗ ಆಗುವುದಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಡಿ ಸಚಿವ ಜಿಟಿ ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ನಡೆಸಿದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಇದ್ದರು. ಅವರು ಕೂಡ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಅರಮನೆ ಮೈದಾನದಲ್ಲಿ ಜೆಡಿಎಸ್ ಸಭೆ ನಡೆದಾಗ ಇಬ್ರಾಹಿಂ ಭಾಗವಹಿಸಿದ್ದರು. ಆ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬೆಂಬಲ ಘೋಷಿಸಿದ್ದರು. ಅಲ್ಲದೆ ಸೀಟು ಹಂಚಿಕೆ ವಿಚಾರದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳುವಂತೆ ಸಲಹೆ ಕೂಡ ಕೊಟ್ಟಿದ್ದರು ಎಂದು ಗೌಡರು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಷ್ಟರ ಮಟ್ಟಿಗೆ ಗೆಲ್ಲಿಸಲು ಆಗಲಿಲ್ಲ ಎಂದು ಇಬ್ರಾಹಿಂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ದೇವೇಗೌಡರು ರಾಜೀನಾಮೆ ಬೇಡ ಪಕ್ಷ ಕಟ್ಟೋಣ ಎಂಬ ಕಿವಿಮಾತು ಹೇಳಿದ್ದರು ಎಂದರು.

ಇಬ್ರಾಹಿಂ ಅವರೊಂದಿಗೆ ಮಾತನಾಡುವುದಾಗಿ ದೇವೇಗೌಡರು ಹೇಳಿದ್ದಾರೆ. ಅಭಿಮಾನಿಗಳ ಒತ್ತಡಕ್ಕೆ ಮಣಿದು ಇಬ್ರಾಹಿಂ ಸಭೆ ನಡೆಸಿದ್ದಾರೆ. ಮಾಜಿ ಶಾಸಕರಾದ ಮಹಿಮಾ ಪಟೇಲ್ ಹಾಗೂ ನಾಡಗೌಡರು ಪಕ್ಷಕ್ಕೆ ಸೇರುವುದಾದರೆ ಅಭ್ಯಂತರವಿಲ್ಲ ಎಂದು ಹೇಳಿದರು. ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಎಸ್ ಮುಗಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ತೀರ್ಮಾನ ಮಾಡಿದ್ದವು ಆಗ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರಾಗಿ ದೇವೇಗೌಡರು ಮಾಡಿದರು. ದೆಹಲಿಗೆ ಕುಮಾರಸ್ವಾಮಿ ಕರೆದಿಲ್ಲ ಎಂಬ ಕಾರಣಕ್ಕೆ ಇಬ್ರಾಹಿಂ ಬೇಸರಗೊಂಡಿದ್ದಾರೆಂದರು.

ವಿದ್ಯೆ ಕೇವಲ ಸರ್ಟಿಫಿಕೇಟ್ ಆಗಿರಬಾರದು, ಸಂಸ್ಕಾರ ಒಳಗೊಂಡಿರಬೇಕು : ಎಚ್‍ಡಿಡಿ

ಲೋಕಸಭೆ ಸೀಟ್ ಹಂಚಿಕೆ ವಿಚಾರದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಕಾಂಗ್ರೆಸ್ ಜೊತೆ ಕೈಜೋಡಿಸಿ ಜೆಡಿಎಸ್ ಮುಗಿಸುವ ಕೆಲಸ ಮಾಡಬೇಡಿ ಎಂದು ಇಬ್ರಾಹಿಂ ಅವರಿಗೆ ಹೇಳುತ್ತೇವೆ. ಪಕ್ಷ ಈಗ ಸಂಕಷ್ಟದಲ್ಲಿದ್ದು ಇಬ್ರಾಹಿಂ ಅವರೇ ರಾಜ್ಯಧ್ಯಕ್ಷರಾಗಬೇಕೆಂದು ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದರು.

7 ಗಂಟೆ ವಿದ್ಯುತ್‍ಗೆ ಆಗ್ರಹ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ರಾಜ್ಯ ಸರ್ಕಾರ 5 ಗಂಟೆ ವಿದ್ಯುತ್ ನೀಡುವುದಾಗಿ ಹೇಳಿದೆ ಅದು ಸಾಲುವುದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ್ದಂತೆ ರೈತರಿಗೆ 7 ಗಂಟೆ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಕತ್ತಲೆ ಭಾಗ್ಯಶುರುವಾಗುತ್ತದೆ. ಕೇವಲ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುವುದಲ್ಲ, ವಿದ್ಯುತ್ ಖರೀದಿಗೂ ಹಣ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಬಿಜೆಪಿ ಆಡಳಿತವೂ ಇಲ್ಲ, ಹಣ ನೀಡುವಂತೆ ಪ್ರಧಾನಿ ಮೋದಿ ಕೇಳುವುದೂ ಇಲ್ಲ, ಇಲ್ಲಿಂದ ಯಾರೂ ಹಣ ಕಳುಹಿಸಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ರಾಜ್ಯದಲ್ಲಿ ಮಾತ್ರ ಜೆಡಿಎಸ್ ಇದ್ದು, ಯಾವುದೇ ರಾಜ್ಯಕ್ಕೆ ಹಣ ಕಳುಹಿಸಿ ಕೊಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹಣ ಕಳುಹಿಸುತ್ತಾರೆಂದು ಜಿಟಿ ದೇವೇಗೌಡರು ಆರೋಪಿಸಿದರು.

RELATED ARTICLES

Latest News