Friday, March 29, 2024
Homeರಾಜ್ಯಹಾಸನಾಂಬೆ ವಿಶೇಷ ದರ್ಶನ ಪಾಸ್‌ಗಳಿಂದ ಎರಡೇ ದಿನಗಳಲ್ಲಿ ಭಕ್ತರಿಂದ 24 ಲಕ್ಷ ರೂ. ಸಂಗ್ರಹ

ಹಾಸನಾಂಬೆ ವಿಶೇಷ ದರ್ಶನ ಪಾಸ್‌ಗಳಿಂದ ಎರಡೇ ದಿನಗಳಲ್ಲಿ ಭಕ್ತರಿಂದ 24 ಲಕ್ಷ ರೂ. ಸಂಗ್ರಹ

ಹಾಸನ, ನ.5- ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ನ.3 ಹಾಗೂ ನ.4ರ ವಿಶೇಷ ದರ್ಶನಕ್ಕೆ 1000ರೂ. ಮುಖ ಬೆಲೆಯ 860 ಪಾಸ್ ಮಾರಾಟವಾಗಿದ್ದು 8,60,000 ರೂ. ಸಂಗ್ರಹಿಸಲಾಗಿದೆ.300 ಮುಖ ಬೆಲೆಯ 5178 ಪಾಸ್ ಮಾರಾಟ ಮಾಡಲಾಗಿ 15,53,400ರೂ. ಸಂಗ್ರಹಿಸಲಾಗಿದ್ದು, ಒಟ್ಟು 23,13,400ರೂ. ಸಂಗ್ರಹವಾಗಿದೆ ಎಂದು ಎಡಿಎಲ್ ಆರ್.ಸುಜಯ್ ಮಾಹಿತಿ ನೀಡಿದ್ದಾರೆ. ಲಾಡು ಮಾರಾಟದಿಂದ 5,12,340 ಸಂಗ್ರಹಿಸಲಾಗಿದೆ. ಆಳ್ವಾಸ್ ಸಾಂಸ್ಕøತಿಕ ಕಾರ್ಯಕ್ರಮ: ನಗರದ ಕಲಾ ಕಾಲೇಜಿನಲ್ಲಿ ಸಂಜೆ 7 ಗಂಟೆಗೆ ಹಮ್ಮಿಕೊಂಡಿರುವ ಆಳ್ವಾಸ್ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ವಿಶೇಷವಾದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಖ್ಯಾತಿ ಪಡೆದಿರುವ ಆಳ್ವಾಸ್ ನುಡಿಸಿರಿ ತಂಡವು ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಯೋಜನೆ ಮಾಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ. ಈ ಸಂಬಂಧ ಪೊಲೀಸ್ ಇಲಾಖೆಯಿಂದಲೂ ಅಗತ್ಯ ಬಂದೋಬಸ್ತ ವ್ಯವಸ್ಥೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ಕೌಟ್ಸ್ ಮತ್ತು ಗೈಡ್ಸ್ ತಂಡದಿಂದ ಅಳಿಲು ಸೇವೆ:

ಹಾಸನಾಂಬ ದರ್ಶನೋತ್ಸವ ಪ್ರಾರಂಭವಾದ ದಿನದಿಂದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸದಸ್ಯರು ಭಕ್ತಾದಿಗಳಿಗೆ ದರ್ಶನಕ್ಕೆ ನೆರವಾಗುವ ಮೂಲಕ ಅಳಿಲು ಸೇವೆ ನೀಡುತ್ತಿದ್ದು , ಸುಮಾರು 200 ಮಂದಿ ನಿಯೋಜನೆಗೊಂಡಿದ್ದಾರೆ.

ಪ್ರತಿದಿನ ಭಕ್ತಾದಿಗಳಿಗೆ ನೀರು- ಮಜ್ಜಿಗೆ ವಿತರಿಸುತ್ತಿರುವ ಇವರ ತಂಡ ವಿಕಲಚೇತನ, ವೃದ್ಧ ಭಕ್ತಾದಿಗಳಿಗೆ ವೀಲ್ ಚೇರ್‍ಗಳ ಮೂಲಕ ದೇವಾಲಯದ ಆವರಣಕ್ಕೆ ಕರೆದುಕೊಂಡು ಬಂದು ದೇವರ ದರ್ಶನ ಮಾಡಿಸಿ ಪುನಃ ನಿಗದಿತ ಸ್ಥಳಕ್ಕೆ ತಲುಪಿಸುತ್ತಿದ್ದಾರೆ.

ಮಡಿಕೇರಿಯ ಬಾಂಬ್ ಸ್ಕ್ವಾಡ್‍ನಿಂದ ಪರಿಶೀಲನೆ:
ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಾಲಯದ ಆವರಣಕ್ಕೆ ಅಲಂಕಾರಕ್ಕೆ ಬಳಸುವ ಹೂವು ಹಾಗೂ ಇತರ ವಸ್ತುಗಳ ಪರಿಶೀಲನೆಗಾಗಿಯೇ ಪೊಲೀಸ್ ಇಲಾಖೆಯಿಂದ ನಿಯೋಜನೆಗೊಂಡಿರುವ ತಂಡವು ಇಂದು ಪರಿಶೀಲನೆ ನಡೆಸಿತು.ಮಡಿಕೇರಿಯಿಂದ ಆಗಮಿಸಿರುವ 8 ಮಂದಿಯ ತಂಡ ಇಂದು ಹಾಸನಾಂಬ ದೇವಾಲಯದ ಆವರಣ ಹಾಗೂ ದೇವಾಲಯದ ಸುತ್ತಮುತ್ತ ಹೊರಗಡೆಯಿಂದ ತಂದು ಅಲಂಕಾರಕ್ಕೆ ಬಳಸಲಾಗುತ್ತಿರುವ ಹೂವಿನ ಹಾರ ಹಾಗೂ ಇತರೆ ವಸ್ತುಗಳನ್ನು ಬಾಂಬ ಪತ್ತೆ ಉಪಕರಣದ ಮೂಲಕ ಎಎಸ್‍ಐ ಶಿವಾನಂದಾ ಹಾಗೂ ರಂಗನಾಥ್ ಪರಿಶೀಲನೆ ನಡೆಸಿದರು.

ದರ್ಶನೋತ್ಸವ ಹಿನ್ನೆಲೆ ವಿವಿಧ ಕಾರ್ಯಕ್ರಮ:

ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಈ ಬಾರಿ ವಿಶೇಷವಾಗಿ ಆಯೋಜಿಸಲಾಗಿದ್ದ ಆಗಸದಿಂದ ಹಾಸನ ಹೆಲಿ ಟೂರಿಸಂ, ಪ್ಯಾರಾಸೆಲಿಂಗ್, ಪ್ಯಾರಾ ಮೋಟರಿಂಗ್, ಪ್ಯಾಕೇಜ್ ಸಾರಿಗೆ ಪ್ರವಾಸದಲ್ಲಿ ಬಹುತೇಕ ಮಂದಿ ಪ್ರಯೋಜನ ಪಡೆದಿದ್ದಾರೆ.

ಹೆಲಿ ಟೂರಿಸಂನಲ್ಲಿ ನ.3ರಂದು 85 ಮಂದಿ ಆಗಸದಲ್ಲಿ ಹಾರಾಟ ನಡೆಸಿದ್ದಾರೆ. ಇಂದು 135 ಮಂದಿ ಹೆಲಿಕ್ಯಾಪ್ಟರ್‍ನಲ್ಲಿ ಹಾಸನ ನಗರ ಸೇರಿದಂತೆ ಹಾಸನಾಂಬ ದೇವಾಲಯ ವೀಕ್ಷಣೆ ಮಾಡಿದ್ದು, ಪ್ರತಿ ಬಾರಿಯೂ ಐದರಿಂದ ಆರು ಮಂದಿ ಹೆಲಿಕ್ಯಾಪ್ಟರ್‍ನಲ್ಲಿ ಸಂಚರಿಸಿದ್ದು ಇದುವರೆಗೆ ಒಟ್ಟು 210 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ.

ಪ್ರತಿ ವ್ಯಕ್ತಿಗೆ 4300ರೂ. ದರ ನಿಗದಿ ಮಾಡಲಾಗಿದ್ದು, ಇನ್ನು ಎರಡು ದಿನಗಳ ಕಾಲ ಕಾರ್ಯಕ್ರಮ ಮುಂದುವರೆಯಲಿದ್ದು ಇಂದು ಮತ್ತು ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹಾಸನ ನಗರ ವೀಕ್ಷಣೆ ಮಾಡಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ಅಭಿಯಂತರ ಮನು ತಿಳಿಸಿದ್ದಾರೆ.

ನ.3ರಂದು ಪ್ಯಾರಾ ಸೈಲಿಂಗ್‍ನಲ್ಲಿ 50 ಮಂದಿ, ಪ್ಯಾರಾ ಮೋಟರಿಂಗ್‍ನಲ್ಲಿ 15 ಮಂದಿ ಆಗಸದಲ್ಲಿ ಹಾರಾಟ ನಡೆಸಿದ್ದು, 30 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ ಎಂದು ಅಕಾರಿ ನಂದಕುಮಾರ್ ಮಾಹಿತಿ ನೀಡಿದ್ದಾರೆ.

ಕೆಎಸ್‍ಆರ್‍ಟಿಸಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಪ್ರಕೃತಿ ಪ್ರವಾಸೋದ್ಯಮ ಪ್ಯಾಕೇಜ್ ಟೂರ್ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಉತ್ಸಾಹ ಕಂಡಂತೆ ಕಾಣುತ್ತಿಲ್ಲ. ಇಂದು ಸಕಲೇಶಪುರ ಮಾರ್ಗ 425 ರೂ.ಗಳ ಪ್ಯಾಕೇಜ್ ಟೂರ್‍ಗೆ ಹಾಗೂ ಬೇಲೂರು ಮಾರ್ಗದ 350 ರೂ.ನ ಪ್ಯಾಕೇಜ್ ಸ್ಟೋರಿಗೆ ಎರಡು ಬಸ್‍ಗಳನ್ನು ನಿಯೋಜನೆ ಮಾಡಲಾಗಿದ್ದು, ಎರಡು ಮಾರ್ಗಗಳಿಂದ 45 ಮಂದಿ ಪ್ರವಾಸ ಮಾಡಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ರಕ್ಷಿತ್ ಮಾಹಿತಿ ನೀಡಿದ್ದಾರೆ.

ಇಂದು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.ಜಿಲ್ಲಾಡಳಿತದಿಂದ ನ.2ರಂದು ನಗರದ ಹಾಸನಾಂಬ ಕಲಾ ಕ್ಷೇತ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಸುಮಾರು 40 ಮಂದಿ ಮಹಿಳೆಯರು ಭಾಗವಹಿಸಿದ್ದು, ಇವರಲ್ಲಿ ಪ್ರಥಮ ಬಹುಮಾನ 5000, ದ್ವಿತೀಯ ಬಹುಮಾನ 2000 ಹಾಗೂ ತೃತೀಯ 1000 ಬಹುಮಾನ ವಿತರಣೆ ಮಾಡಲಾಗಿದೆ. ಉಳಿದ 32 ಸ್ರ್ಪಗಳಿಗೆ ತಲಾ 500 ರೂ. ಸಮಾಧಾನಕರ ಬಹುಮಾನ ವಿತರಿಸಲಾಗಿದೆ ಎಂದು ಅಕಾರಿ ಸುಧಾ ಅವರು ತಿಳಿಸಿದ್ದಾರೆ.

RELATED ARTICLES

Latest News