Wednesday, April 24, 2024
Homeಬೆಂಗಳೂರುಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ

ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ

ಬೆಂಗಳೂರು,ನ.7- ನಗರದಲ್ಲಿ ನಿನ್ನೆ ಬಿಟ್ಟು ಬಿಡದೆ ಸುರಿದ ಭಾರಿ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ.
ಹಲವಾರು ಗಂಟೆಗಳ ಕಾಲ ಬಿಟ್ಟುಬಿಡದೆ ಸುರಿದ ಮಳೆ ಹಲವಾರು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಿದೆ. ರಾತ್ರಿ ಸುರಿದ ಮಳೆಗೆ ಸಹಕಾರ ನಗರದ ಜೆ.ಬ್ಲಾಕ್ ನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ರಾತ್ರಿಯಿಡಿ ಜಾಗರಣೆ ನಡೆಸುವಂತಾಗಿತ್ತು.

ಸಹಕಾರ ನಗರದ ಬಿಗ್ ಮಾರ್ಕೇಟ್ ಹಿಂಭಾಗದ ಮನೆಗಳಿಗೆ ನುಗ್ಗಿದ ಚರಂಡಿ ನೀರನ್ನು ಬೆಳಗ್ಗೆಯಾದರೂ ಅಲ್ಲಿನ ನಿವಾಸಿಗಳು ಮಳೆ ನೀರು ಹೊರ ಹಾಕುತ್ತಿರುವ ದೃಶ್ಯಗಳು ಕಂಡುಬಂದಿದೆ. ಅಲ್ಲಿನ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಡ್ರೈನೇಜ್ ನೀರು ನುಗ್ಗಿರುವುದು ಮಾತ್ರವಲ್ಲದೆ ಸಂಪ್ ಗಳಿಗೂ ಸೇರಿರುವುದರಿಂದ ಇಡೀ ಸಂಪ್ ನೀರನ್ನು ಜನ ಹೊರ ಹಾಕುತ್ತಿದ್ದಾರೆ. ಕೆಲವರು ಮೋಟರ್ ಪಂಪ್ ಬಳಸಿ ಸಂಗ್ರಹವಾಗಿರುವ ಎಲ್ಲ ನೀರನ್ನು ಮೋರಿಗಳಿಗೆ ಹರಿ ಬಿಡುತ್ತಿದ್ದಾರೆ.

ಇನ್ನು ಕುರುಬರ ಹಳ್ಳಿಯಲ್ಲಿ ಮನೆಗಳಿಗೆ ನುಗ್ಗಿದ ನೀರು ಹಾಸಿಗೆ, ದಿನಸಿ ಪದಾರ್ಥಗಳನ್ನು ಹಾಳು ಮಾಡಿದೆ. ಪಾತ್ರೆ, ಸಿಲಿಂಡರ್ ಮ ತ್ತಿತರ ವಸ್ತುಗಳು ನೀರಿನಲ್ಲಿ ತೇಲಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಅಲ್ಲಿನ ನಿವಾಸಿಗಳ ಪರದಾಟ ಹೇಳತೀರದಾಗಿದೆ. ನಿನ್ನೆ ಅತಿ ಹೆಚ್ಚು ಮಳೆಯಾಗಿರುವ ಯಲಹಂಕದ ಕೋಗಿಲು ಕ್ರಾಸ್‍ನ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಬೆಳಿಗ್ಗೆಯಾದರೂ ಹಾಳುದ್ದ ನೀರು ನಿಂತಿದ್ದರಿಂದ ವಾಹನ ಸವಾರರು ಮುಂದೆ ಸಂಚರಿಸಲು ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿತ್ತು.

ಬೈಯಪ್ಪನಹಳ್ಳಿ ಭಾಗದಲ್ಲಿ ರಸ್ತೆಯಲ್ಲಿ ಈಗಲೂ ನಿಂತಿರುವ ಮಳೆ ನೀರಿನಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಅದೇ ರೀತಿ ಬಸವೇಶ್ವರನಗರ, ರಾಜಾಜಿನಗರ, ಶಿವಾಜಿನಗರ ಮತ್ತಿತರ ಪ್ರದೇಶಗಳಲ್ಲೂ ಮಳೆಯಿಂದ ಸಾಕಷ್ಟು ಅವಘಡಗಳು ಸಂಭವಿಸಿವೆ ಎಂದು ವರದಿಯಾಗಿದೆ.

ಅಂಡರ್‍ಪಾಸ್‍ಗಳು ಬಂದ್: ಕೆಲ ತಿಂಗಳ ಹಿಂದೆ ಅಂಡರ್‍ಪಾಸ್‍ನಲ್ಲಿ ನಿಂತಿದ್ದ ಹಾಳುದ್ದ ನೀರಿನಲ್ಲಿ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೆÇಲೀಸರು ನಗರದ ಬಹುತೇಕ ಅಂಡರ್‍ಪಾಸ್‍ಗಳನ್ನು ಕ್ಲೋಸ್ ಮಾಡಿದ್ದಾರೆ. ಯಲಹಂಕ ಬಳಿಯ ಕೇಂದ್ರಿಯ ವಿಹಾರ ಅಪಾಟ್ರ್ಮೆಂಟ್‍ಗೂ ನೀರು ನುಗ್ಗಿರುವುದರಿಂದ ಬೇಸ್ಮೆಂಟ್‍ನಲ್ಲಿ ನಿಲ್ಲಿಸಿದ್ದ ಕಾರು, ಬೈಕ್‍ಗಳು ನೀರಿನಲ್ಲಿ ಮುಳುಗಿವೆ. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಳೆ ನೀರನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಮಿಜೋರಾಂನಲ್ಲಿ ಬಿಜೆಪಿ ಜೊತೆ ಮೈತ್ರಿಯಿಲ್ಲ : ಝೋರಾಮ್‍ತಂಗ

ಡಿಕೆಶಿ ಭೇಟಿ: ಅತಿ ಹೆಚ್ಚು ಮಳೆ ಹಾನಿ ಸಂಭವಿಸಿರುವ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‍ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ಎನ್ನುವುದನ್ನು ತೋರಿಸುವ ಮಳೆ ಗ್ರಾಫ್ ಸ್ಕ್ರೀನ್ ವಿಕ್ಷಣೆ ಮಾಡಿದ ಡಿಸಿಎಂ ಅವರಿಗೆ ಅಕಾರಿಗಳು ಮೊಬೈಲ್ ಮುಖಾಂತರ ಮಾಹಿತಿ ನೀಡಿದರು.

ಇನ್ನು ಐದು ದಿನ ಮಳೆ : ರಾಜ್ಯದಾದ್ಯಂತ ಇನ್ನು ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಕೋಲಾರ ಜಿ¯್ಲÉಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಿದ್ದರೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದ್ದು, ಎರಡೂ ದಿನ ಮೋಡ ಕವಿದ ವಾತಾವರಣ, ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆಯಂತೆ.

ಎಲ್ಲೆಲ್ಲಿ ಎಷ್ಟು ಮಳೆ
ಯಲಹಂಕ -14.7ಸೆಂಮಿ
ಹಂಪಿನಗರ 9.4ಸೆಂಮಿ
ನಾಗಪುರ (ವೆಸ್ಟï ಜೋನ್ ) 8.95ಸೆಂಮಿ
ಜಕ್ಕೂರು- 8.65ಸೆಂಮಿ
ನಂದಿನಿ ಲೇಔಟ್ -8.55
ವಿಶ್ವನಾಥ್ ನಾಗೇನಹಳ್ಳಿ (ಈಸ್ಟ್ ಜೋನ್ ) -7.5ಸೆಂಮಿ
ರಾಜ್ ಮಹಲ್ ಗುಟ್ಟಳ್ಳಿ -7.6
ಗಾಳಿ ಆಂಜನೇಯ ಟೆಂಪಲ್ -7.5ಸೆಂಮಿ
ಕೊಟ್ಟಿಗೆಪಾಳ್ಯ -7ಸೆಂಮಿ
ಕಮ್ಮನಹಳ್ಳಿ (ಈಸ್ಟ್ ಜೋನ್ )-6.95
ಮಾರುತಿ ಮಂದಿರ ವಾರ್ಡ್ -6.8ಸೆಂಮಿ
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ -6.75ಸೆಂಮಿ
ಅಗ್ರಹಾರ ದಾಸರಹಳ್ಳಿ -6.7 ಸೆಂ ಮೀಟರ್‍ನಷ್ಟು ಮಳೆಯಾಗಿದೆ.

RELATED ARTICLES

Latest News