Wednesday, April 24, 2024
Homeರಾಜ್ಯರಾಜ್ಯದ 216 ತಾಲ್ಲೂಕುಗಳು ಬರಪೀಡಿತ ; ಸರ್ಕಾರ ಘೋಷಣೆ

ರಾಜ್ಯದ 216 ತಾಲ್ಲೂಕುಗಳು ಬರಪೀಡಿತ ; ಸರ್ಕಾರ ಘೋಷಣೆ

ಬೆಂಗಳೂರು,ಅ.13- ಹೆಚ್ಚುವರಿಯಾಗಿ 21 ಬರಪೀಡಿತ ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 216 ತಾಲ್ಲೂಕುಗಳು ಬರಪೀಡಿತವಾಗಿವೆ. 189 ತೀವ್ರ ಬರಪೀಡಿತ ತಾಲ್ಲೂಕು 17 ಸಾಧಾರಣ ಬರಪೀಡಿತ ತಾಲ್ಲೂಕುಗಳಾಗಿವೆ. ಕೇಂದ್ರ ಸರ್ಕಾರದ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಗೆ ನೀಡಿರುವ ಬೆಳೆ ಹಾನಿ ಸಮೀಕ್ಷೆಯ ವರದಿ ಆಧರಿಸಿ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಹೆಚ್ಚುವರಿ 21 ಬರಪೀಡಿತ ತಾಲ್ಲೂಕುಗಳ ಪೈಕಿ 17 ತಾಲ್ಲೂಕು ತೀವ್ರ ಬರಪೀಡಿತವಾಗಿದ್ದು, 4 ತಾಲ್ಲೂಕು ಸಾಧಾರಣ ಬರಪೀಡಿತವಾಗಿವೆ. ಈ ಹಿಂದೆ ಘೋಷಣೆ ಮಾಡಿದ್ದ 195 ತಾಲ್ಲೂಕುಗಳ ಪೈಕಿ 161 ತಾಲ್ಲೂಕುಗಳು ಬರಪೀಡಿತವಾಗಿದ್ದವು. ಸಾಧಾರಣ ಬರಪೀಡಿತವೆಂದು ಗುರುತಿಸಲಾಗಿದ್ದ 34 ತಾಲ್ಲೂಕುಗಳ ಪೈಕಿ 22 ತಾಲ್ಲೂಕುಗಳ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿರುವ ವರದಿ ಆಧರಿಸಿ 11 ತಾಲ್ಲೂಕುಗಳು ತೀವ್ರ ಬರ ಹಾಗೂ 11 ಸಾಧಾರಣ ಬರ ಎಂದು ಘೋಷಿಸುವ ಅರ್ಹತೆ ಪಡೆದಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ಸೆಪ್ಟೆಂಬರ್ ಅಂತ್ಯದವರಿಗೆ ಬರ ಪರಿಸ್ಥಿತಿ ಕಂಡು ಬಂದ 28 ತಾಲ್ಲೂಕುಗಳ ಪೈಕಿ 18 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 4 ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ. ಹೆಚ್ಚುವರಿ 21 ಬರಪೀಡಿತ ತಾಲ್ಲೂಕುಗಳ ಪೈಕಿ ಬೆಳಗಾವಿ, ಖಾನಾಪುರ, ಚಾಮರಾಜನಗರ, ಅಳ್ನಾವರ, ಅಣ್ಣೀಗೇರಿ, ಕಲಘಟಗಿ, ಮುಂಡರಗಿ, ಆಲೂರು, ಅರಸೀಕೆರೆ, ಹಾಸನ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಪೊನ್ನಂಪೇಟೆ, ಕೆಆರ್ ನಗರ, ಹೆಬ್ರಿ ಹಾಗೂ ದಾಂಡೇಲಿ ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

ಯಳಂದೂರು, ಮೂಡಿಗೆರೆ, ತರೀಕೆರೆ, ಸಿದ್ದಾಪುರ ಸಾಧಾರಣ ಬರಪೀಡಿತ ತಾಲ್ಲೂಕುಗಳಾಗಿವೆ. ಸೆಪ್ಟೆಂಬರ್‍ನಲ್ಲಿ 34 ಸಾಧಾರಣ ಬರಪೀಡಿತವೆಂದು ಘೋಷಿಸಲಾಗಿತ್ತು. ಆ ತಾಲ್ಲೂಕುಗಳಲ್ಲಿ ಮರುಬೆಳೆ ಸಮೀಕ್ಷೆ ಅನ್ವಯ 11 ತಾಲ್ಲೂಕುಗಳು ತೀವ್ರ ಬರಪೀಡಿತವಾಗಿವೆ. ಅವುಗಳೆಂದರೆ ಬೆಂಗಳೂರು ಉತ್ತರ, ಗುಂಡ್ಲುಪೇಟೆ, ಹನೂರು, ಬೇಲೂರು, ಚನ್ನರಾಯಪಟ್ಟಣ, ಹೊಳೇನರಸೀಪುರ, ಸೋಮವಾರಪೇಟೆ, ಮಾಲೂರು, ದೇವದುರ್ಗ, ಮಸ್ಕಿ, ತುಮಕೂರು.

ಸಾಧಾರಣ ಬರಪೀಡಿತ ತಾಲ್ಲೂಕುಗಳೆಂದರೆ ಕೊಳ್ಳೇಗಾಲ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಮಂಗಳೂರು, ಮೂಡಬಿದ್ರೆ, ಸಕಲೇಶಪುರ, ಚನ್ನಪಟ್ಟಣ, ಮಾಗಡಿ, ಬ್ರಹ್ಮಾವರ ಹಾಗೂ ಕಾರವಾರ ತಾಲ್ಲೂಕುಗಳು. ಮುಂಗಾರು ಹಂಗಾಮಿನಲ್ಲಿ ಬರಪೀಡಿತವಾಗಿರುವ 216 ತಾಲ್ಲೂಕುಗಳಲ್ಲಿ ಬರ ನಿರ್ವಹಣೆ ಕಾರ್ಯಕ್ರಮವನ್ನು ಜಿಲ್ಲಾಕಾರಿಗಳು ಮುಂದಿನ 6 ತಿಂಗಳವರೆಗೆ ಕೈಗೊಳ್ಳಬೇಕಾಗಿದೆ.

ಇಸ್ರೇಲ್‍ನಿಂದ ತಾಯ್ನಾಡಿಗೆ ಬಂದಿಳಿದ ಭಾರತೀಯರು

ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಬರ ಪರಿಹಾರ ಮಾರ್ಗಸೂಚಿ ಅನ್ವಯ ಬರಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ.

RELATED ARTICLES

Latest News