ಕೆರೆಗೆ ನೀರು ತುಂಬಿಸಲು ಒತ್ತಾಯಿಸಿ ಹೊಕ್ರಾಣಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಮುದ್ದೇಬಿಹಾಳ,ಏ.21- ತಮ್ಮೂರಿನ ಕೆರೆಯನ್ನು ಕಾಲುವೆಯ ನೀರು ಹರಿಸಿ ತುಂಬಿಸಬೇಕು. ಇಲ್ಲದಿದ್ದರೆ ಏ. 23ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವುದಾಗಿ ತಾಲೂಕಿನ ಹೊಕ್ರಾಣಿ ಗ್ರಾಮಸ್ಥರು ಘೋಷಿಸಿದ್ದಾರೆ.

ತಾಲೂಕಿನ ಹೊಕ್ರಾಣಿ ಗ್ರಾಮದ ಅಗಸಿಯ ಬಳಿ ಸಭೈ ಸೇರಿದ್ದ ಗ್ರಾಮಸ್ಥರು ಕೆರೆ ತುಂಬಿಸುವಂತೆ ಸಾಕಷ್ಟು ಬಾರಿ ಕೆಬಿಜೆಎನ್‍ಎಲ್ ಅಧಿಕಾರಿಗಳನ್ನು ಕೋರಿದ್ದರೂ ಪ್ರಯೋಜನವಾಗಿಲ್ಲ. ಹೊಕ್ರಾಣಿ ಕೆರೆ ತುಂಬಿದರೆ ಐದು ಗ್ರಾಮಗಳ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತದೆ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರು, ಗ್ರಾಮಸ್ಥರ ಅಳಲು ಕೇಳದೆಇದ್ದರೆ ಯಾವ ಮತದಾನದ ಹಕ್ಕು ಚಲಾಯಿಸಿ ಏನು ಮಾಡುವುದು ಎಂಬ ತೀರ್ಮಾನ ಕೈಗೊಂಡಿದ್ದು, ಮತದಾನದ ದಿನ ಯಾರೊಬ್ಬರೂ ಮತ ಚಲಾಯಿಸುವುದಿಲ್ಲ ಎಂದು ಹೇಳಿದರು.

ಮುಖಂಡ ಹಣಮಂತ್ರಾಯ ಕೊಂಗನೂರ, ಬಿ.ಜೆ. ಪಾಟೀಲ, ರಾಚಪ್ಪ ಜಗಲಿ ಮಾತನಾಡಿ, ಚುನಾವಣೆ ಬಂದಾಗ ಜನಪ್ರತಿನಿಧಿಗಳು, ಮಂತ್ರಿಗಳು, ಶಾಸಕರು ಬಂದು ಮತ ಕೇಳಿ ಹೋಗುತ್ತಾರೆ. ಆದರೆ ನೀಡಿರುವ ಆಶ್ವಾಸನೆಗಳು ಯಾವುದೂ ಈಡೇರಿಲ್ಲ. ಹೊಕ್ರಾಣಿ ಕೆಳಭಾಗದಲ್ಲಿರುವ ಮೂರ್ನಾಲ್ಕು ಊರಿನ ಕೆರೆಗಳು ಭರ್ತಿಯಾಗಿದ್ದು, ನಮ್ಮ ಊರಿನ ಕೆರೆ ತುಂಬಿಲ್ಲ.

ಇದರಿಂದ ಜನ, ಜಾನುವಾರುಗಳು ತೀವ್ರ ಪರದಾಡುವಂತಾಗಿದೆ ಎಂದು ಹೇಳಿದರು. ಕೆರೆ ತುಂಬಿಸಿದರೆ ಮಾತ್ರ ನಾವು ಮತದಾನ ಮಾಡುತ್ತೇವೆ. ಇಲ್ಲವಾದರೆ ಮತದಾನ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ. ಮುಖಂಡ ರವಿ ಜಗಲಿ, ಮಡಿವಾಳಪ್ಪ ಪಾಟೀಲ, ಬಿ.ಎಚ್. ಬೇವಿನಮಟ್ಟಿ, ಎಸ್.ಎಂ. ಜಗಲಿ, ಐ.ಎಂ. ಬಿರಾದಾರ, ಎಂ.ಎ. ಕೊಂಗನೂರ, ಯಮನಪ್ಪ ಹಡಪದ, ಬಿ.ಕೆ. ಜಗಲಿ, ಅಮಿನಸಾಬ ಕೂಚಬಾಳ, ಇಬ್ರಾಹಿಂ ಗುರಿಕಾರ, ಲಾಳೇಸಾ ಹಡ್ಲಗೇರಿ, ಎಸ್.ಎಂ. ಪಾಟೀಲ, ಎಸ್.ಬಿ. ವಾಲೀಕಾರ, ಸಿದ್ದನಗೌಡ ಪಾಟೀಲ, ಹುಸೇನಸಾ ಗುರಿಕಾರ, ಶರಣಪ್ಪ ಜಗಲಿ, ಹನಮಂತ ಇಂಗಳಗೇರಿ, ಎನ್.ಡಿ. ಬಿರಾದಾರ ಮೊದಲಾವದರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )