ಪೌರತ್ವ ವಿವಾದದ ತೂಗುಗತ್ತಿಯಿಂದ ಬಚಾವಾದ ರಾಹುಲ್…!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.22- ಲೋಕಸಭೆ ಚುನಾವಣೆಗೆ ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಮೇಲಿನ ಪೌರತ್ವ ವಿವಾದ ತೂಗುಗತ್ತಿಯಿಂದ ಪಾರಾಗಿದ್ದಾರೆ.

ರಾಹುಲ್ ಅವರು ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಸಲ್ಲಿಸಿರುವ ನಾಮಪತ್ರ ಸಿಂಧುತ್ವ ಹೊಂದಿದೆ ಎಂದು ಚುನಾವಣಾ ಆಯೋಗದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಹುಲ್ ಅವರ ನಾಮಪತ್ರವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಅವರ ಪೌರತ್ವಕ್ಕೆ ಸಂಬಂಧಪಟ್ಟ ವಿವಾದಗಳ ಅಂಶ ನಮಗೆ ಕಂಡುಬಂದಿಲ್ಲ. ಅವರ ನಾಮಪತ್ರ ಸಿಂಧುವಾಗಿದೆ. ಅವರ ಸ್ಪರ್ಧೆಗೆ ಯಾವುದೇ ಅಡ್ಡಿ ಎಂದು ನಾಮಿನೇಷನ್ ಪರಿಶೀಲಿಸಿದ ಹಿರಿಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ರಾಹುಲ್ ಗಾಂಧಿ ಈ ಹಿಂದೆ ತಾವು ಬ್ರಿಟನಿನ್ನ ಪ್ರಜೆ ಎಂದು ಹೇಳಿಕೊಂಡಿದ್ದರು ಮತ್ತು ಶೈಕ್ಷಣಿಕ ಪದವಿಯ ವಿಷಯದಲ್ಲಿ ಗೊಂದಲದ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಸ್ವತಂತ್ರ ಅಭ್ಯರ್ಥಿ ಧ್ರುವ ಲಾಲ್ ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಿನ್ನೆ ನಡೆಯಬೇಕಿದ್ದ ರಾಹುಲ್‍ರ ನಾಮಪತ್ರ ಪರಿಶೀಲನೆಯನ್ನು ರಿಟರ್ನಿಂಗ್ ಆಫೀಸರ್ ಇಂದಿಗೆ (ಸೋಮವಾರಕ್ಕೆ) ನಿಗದಿಪಡಿಸಿದ್ದರು.

ರಾಹುಲ್ ಗಾಂಧಿ 2004ರಲ್ಲಿ ಬ್ರಿಟನ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡುವಾಗ ತಾವು ಬ್ರಿಟಿಷ್ ಪ್ರಜೆ ಎಂದು ಹೇಳಿಕೊಂಡಿದ್ದು, ಅದು ಪ್ರಸ್ತುತ ಚುನವಣಾ ಸಂದರ್ಭದಲ್ಲಿ ವಿವಾದದ ಸ್ವರೂಪ ಪಡೆದುಕೊಂಡಿತ್ತು.

ಏತನ್ಮಧ್ಯೆ ಇಂಗ್ಲೆಂಡ್‍ನ ಪ್ರತಿಷ್ಠಿತ ವಿಶ್ವವಿದ್ಯಾಲಯ ಕೆಂಬ್ರಿಡ್ಜ್ ಯೂನಿರ್ವಸಿಟಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕೌಲ್ ವಿನ್ಸಿ ಹೆಸರಿನಲ್ಲಿ ಎಂ.ಫಿಲ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ಹೇಳಿಕೆ ನೀಡಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin