ಅಂಗನವಾಡಿ ಆಹಾರದಲ್ಲಿ ಹುಳ, ಟ್ವೀಟ್‍ನಲ್ಲಿ ಹರಿಹಾಯ್ದ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

ಕುಂದಗೋಳ,ಮೇ 16- ನಗರದ ಶಂಭುಲಿಂಗೇಶ್ವರ ದೇವಸ್ಥಾನ ಬಳಿಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪೂರೈಕೆಯಾಗುತ್ತಿರುವ ಆಹಾರ ಧಾನ್ಯಗಳಲ್ಲಿ ಹುಳ-ಹುಪ್ಪಟೆಗಳು ಪತ್ತೆಯಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆ ಗರಂ ಆಗಿದ್ದಾರೆ.

ಕುಂದಗೋಳ ವಿಧಾಸಭಾ ಉಪಚುನಾವಣೆ ಪ್ರಯುಕ್ತ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಅಂಗನವಾಡಿ ಕೇಂದ್ರ ಭೇಟಿ ನೀಡಿ ಆಹಾರ ಧಾನ್ಯಗಳನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇದರಿಂದ ಸಿಟ್ಟಾದ ಅವರು ಸ್ಥಳದಲ್ಲಿದ್ದ ಅಂಗನವಾಡಿ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಅಲ್ಲದೆ ಈ ಕುರಿತು ಟ್ವೀಟರ್‍ನಲ್ಲಿ ಸರ್ಕಾರದ ವಿರುದ್ಧ ‘ಕುಂದಗೋಳ ಕ್ಷೇತ್ರದಲ್ಲಿ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ನಮ್ಮ ರಾಜ್ಯ ಸರ್ಕಾರ ಇಂತಹ ಕಳಪೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುತ್ತಿದೆ.

ಇಂತಹ ಧಾನ್ಯಗಳನ್ನು ಪೂರೈಕೆ ಮಾಡಿ ಮಕ್ಕಳು ಮಹಿಳೆಯರ ಆರೋಗ್ಯವನ್ನು ಹಾಳುಗೆಡವದಿರಿ’ ಎಂದು ಟ್ವಿಟ್ ಮಾಡಿ ಮನವಿ ಮಾಡಿದ್ದಾರೆ.

Facebook Comments

Sri Raghav

Admin