ಅಂಗನವಾಡಿ ಕಾರ್ಯಕರ್ತೆಯರಿಗೆ, ಪಿಡಿಒಗಳಿಗೆ ಕಾರ್ಯಾಗಾರ

ಈ ಸುದ್ದಿಯನ್ನು ಶೇರ್ ಮಾಡಿ

maluru

ಮಾಲೂರು, ಅ.25- ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ತಾಪಂನಿಂದ ಅಂಗನವಾಡಿ ಕಾರ್ಯಕರ್ತೆಯರು,, ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಬ್ಯಾಲಹಳ್ಳಿ ಗೋವಿಂದಗೌಡ, ಗ್ರಾಮಗಳಲ್ಲಿನ ರೈತರು, ಮಹಿಳೆಯರು, ಅನಕ್ಷರಸ್ಥರು, ಬಡವರನ್ನು ಒಗ್ಗೂಡಿಸಿ ಸಂಘಗಳನ್ನು ಮಾಡಬೇಕು. ಸರ್ಕಾರದ ಸವಲತ್ತುಗಳು ಬಹುತೇಕ ಮದ್ಯವರ್ತಿಗಳ ಪಾಲಾಗುತ್ತಿವೆ. ಆದ್ದರಿಂದ ಡಿಸಿಸಿ ಬ್ಯಾಂಕ್ ಮಹತ್ವವಾದ ಹೆಜ್ಜೆಯನ್ನುಯಿಟ್ಟಿದ್ದು, ಗುಂಪುಗಳು ಚಿಕ್ಕದಾಗಿದ್ದಷ್ಟು ಒತ್ತಡ ಕಡಿಮೆಯಿರುವುದರಿಂದ 10ಜನರ ಗುಂಪುಗಳನ್ನು ರಚನೆ ಮಾಡಿ ಬಳಿಕ ಡಿಸಿಸಿ ಬ್ಯಾಂಕಿನಿಂದ 33ಪೈಸೆ ಬಡ್ಡಿದರದಲ್ಲಿ ಸಿಗುವಂತಹ ಸಾಲ ಸೌಲಭ್ಯಗಳಂತ ಯೋಜನೆಗಳ ಬಗ್ಗೆ ಮಾಹಿತಿ ನೀಡಿದಾಗ ಮಹಿಳೆಯರು ಅದನ್ನು ಬಳಸಿಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದುತ್ತಾರೆ ಎಂದರು.

ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಡಿಸಿಸಿ ಬ್ಯಾಂಕಿನ ಸಹಕಾರಕ್ಕೆ ಬಂದರೆ ಸಮಾಜವನ್ನು ಆರ್ಥಿಕವಾಗಿ ಸದೃಡಗೊಳಿಸಬಹುದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.ಶಾಸಕ ಕೆ.ಎಸ್.ಮಂಜುನಾಥ್‍ಗೌಡ, ಜಿಪಂ ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯ ಚಿನ್ನಸ್ವಾಮಿಗೌಡ, ತಾಪಂ ಸದಸ್ಯರಾದ ಹೆಚ್.ಎನ್.ಶ್ರೀನಾಥ್, ವಿ.ನಾಗೇಶ್, ಕಾರ್ಯಾನಿರ್ವಹಣಾಧಿಕಾರಿ ಸಂಜೀವಪ್ಪ, ಸಿಡಿಪಿಒ ಕಚೇರಿಯ ರತ್ನಮ್ಮ, ಪುರಸಭಾ ಉಪಾಧ್ಯಕ್ಷೆ ಗೀತಮ್ಮರಮೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚನ್ನರಾಯಪ್ಪ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin