ಅಂಡಮಾನ್‍ನಲ್ಲಿ ಭಾರೀ ಬಿರುಗಾಳಿ, ಮಳೆ : ಅಪಾಯದಲ್ಲಿ ಸಿಲುಕಿರುವ 800 ಪ್ರವಾಸಿಗರು

ಈ ಸುದ್ದಿಯನ್ನು ಶೇರ್ ಮಾಡಿ

Andaman

ಪೋರ್ಟ್ ಬ್ಲೇರ್, ಡಿ.7– ಭಾರೀ ಬಿರುಗಾಳಿ ಮತ್ತು ಮಳೆಯಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ತತ್ತರಿಸಿದ್ದು, ಅಪಾಯದಲ್ಲಿ ಸಿಲುಕಿರುವ 800ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆಗೆ ನೌಕಾಪಡೆ ಸಮರೋಪಾದಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.  ರಾಜಧಾನಿ ಪೋರ್ಟ್ ಬ್ಲೇರ್‍ನ ಹ್ಯಾವ್‍ಲಾಕ್ ದ್ವೀಪದಲ್ಲಿ ಪ್ರವಾಸಿಗರು ಬಿರುಗಾಳಿ ಮತ್ತು ಮಳೆ ಆರ್ಭಟಕ್ಕೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರನ್ನು ಅಪಾಯದಿಂದ ಪಾರು ಮಾಡಲು ಭಾರತೀಯ ನೌಕಾಪಡೆಯು ಮೂರು ನೌಕೆಗಳು ಸ್ಥಳಕ್ಕೆ ತೆರಳಿವೆ. ಆದರೆ ತೀವ್ರ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಬಿಟ್ರಾ, ಬಂಗಾರಾಮ್ ಮತ್ತು ಕುಂಭೀರ್ ಎಂಬ ರಕ್ಷಣಾ ನೌಕೆಗಳು ಹ್ಯಾವ್‍ಲಾಕ್ ದ್ವೀಪದಲ್ಲಿ ಅಪಾಯಕ್ಕೆ ಸಿಲುಕಿರುವ ಪ್ರವಾಸಿಗರ ನಿಖರ ಸ್ಥಳವನ್ನು ಪತ್ತೆ ಮಾಡಲು ಪರಿಶ್ರಮಪಡಬೇಕಾಯಿತು. ಪ್ರವಾಸಿಗರ ಸುರಕ್ಷತೆ ಬಗ್ಗೆ ಈತನಕ ನಿಖರ ವರ್ತಮಾನ ತಿಳಿದುಬಂದಿಲ್ಲ. ಹ್ಯಾವ್‍ಲಾಕ್ ದ್ವೀಪವು ಕಡಲ ಕಿನಾರೆಗಳಿಂದ ಮನಮೋಹಕವಾಗಿರುವ ಈ ದ್ವೀಪಕಲ್ಪಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡಿತ್ತಾರೆ. ಇದು ಜಗತ್ತಿನ ಅತ್ಯಂತ ಸುಂದರ ತಾಣಗಳಲ್ಲಿ ಒಂದಾಗಿದೆ. ರಾಜಧಾನಿ ಪೋರ್ಟ್‍ಬ್ಲೇರ್‍ನಿಂದ ಸುಮಾರು 40 ಕಿ.ಮೀ.ದೂರವಿರುವ ಈ ಪರ್ಯಾಯ ದ್ವೀಪ ತಲುಪಲು ದೋಣಿಯಲ್ಲಿ ಹೋಗಬೇಕು. ಆದರೆ ಈಗ ವರುಣನ ಆರ್ಭಟದಿಂದಾಗಿ 800 ಮಂದಿ ಪ್ರವಾಸಿಗರ ಭವಿಷ್ಯ ಡೋಲಾಯಮಾನವಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin