ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Earthquake--01

ನವದೆಹಲಿ, ಮಾ.14-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕಲ್ಪದಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಯಾವುದೇ ಆಸ್ತಿ ಹಾಗೂ ಪ್ರಾಣಹಾನಿಯಾಗಿರುವ ವರದಿಯಾಗಿಲ್ಲ.  ಮುಂಜಾನೆ 8.21ರ ಸಮಯದಲ್ಲಿ ನಿಕೋಬಾರ್ ದ್ವೀಪ ಪ್ರಾಂತ್ಯದ 10 ಕಿ.ಮೀ ಆಳದಿಂದ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ.   ರಿಕ್ಟರ್ ಮಾಪಕದಲ್ಲಿ 5.9ರಷ್ಟು ಭೂಕಂಪನದ ಪ್ರಮಾಣ ದಾಖಲಾಗಿದೆ ಎಂದು ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಗರ್ಭ ಅಧ್ಯಯನ ಕೇಂದ್ರ ತಿಳಿಸಿದೆ. ಈ ಭೂಕಂಪನವು ಯಾವುದೇ ಸುನಾಮಿ ಮುನ್ಸೂಚನೆ ನೀಡಿಲ್ಲವಾದರೂ ಇದರ ಬಗ್ಗೆ ಭಾರತ ಸುನಾಮಿ ಮುನ್ಸೂಚನಾ ಕೇಂದ್ರವು ರಾಜ್ಯಗಳಿಗೆ ಹಾಗೂ ನೆರೆಯ ರಾಷ್ಟ್ರಗಳಿಗೆ ಎಚ್ಚರದಿಂದಿರಲು ತಿಳಿಸಿದೆ. ಜಮ್ಮು-ಕಾಶ್ಮೀರದ ಕತುವಾ ಬಳಿ 3.6ರ ಪ್ರಮಾಣದಲ್ಲಿ ಇಂದು ಮುಂಜಾನೆ 5.48ರಲ್ಲಿ ಲಘು ಭೂಕಂಪನವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin