ಅಂತರರಾಷ್ಟ್ರೀಯ ಚಿತ್ರ ‘ನ್ಯೂಕ್ಲಿಯರ್’ ಗೆ 340 ಕೋಟಿ ರೂ. ಬಜೆಟ್ : ವರ್ಮಾ ಬಿಗ್ ಪ್ರಾಜೆಕ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Varma

ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮ ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬಿಗ್ ಪ್ರಾಜೆಕ್ಟ್ ಪ್ರಕಟಿಸಿದ್ದಾರೆ. ಹೊಸ ಸಿನಿಮಾದ ಹೆಸರು ನ್ಯೂಕ್ಲಿಯರ್. 340 ಕೋಟಿ ರೂ.ಗಳ ದೊಡ್ಡ ಬಜೆಟ್‍ನಲ್ಲಿ ನನ್ನ ಮೊದಲ ಅಂತಾರಾಷ್ಟ್ರೀಯ ಸಿನಿಮಾ ತಯಾರಾಗುತ್ತಿದೆ ಎಂದು ಆರ್‍ಜಿವಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯದ ಸರ್ಕಾರ್-3 ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ವರ್ಮಾ ನ್ಯೂಕ್ಲಿಯರ್ ಪ್ರಾಜೆಕ್ಟ್‍ನ ಬಾಂಬ್ ಸಿಡಿಸಿದ್ದಾರೆ. ಈ ಸಿನಿಮಾದ ಪೋಸ್ಟ್ ರ್‍ನನ್ನು ಆರ್‍ಜಿವಿ ಷೇರ್ ಮಾಡಿದ್ದಾರೆ. ಈ ಪೋಸ್ಟ್ ರ್‍ಗೆ ನೀಡಿರುವ ಇಂಗ್ಲಿಷ್ ವಾಕ್ಯಗಳ ಕನ್ನಡ ಅರ್ಥ ಹೀಗಿದೆ : ಅಟಂ ಬಾಂಬೊಂದು ಮುಂಬೈಗೆ ಕಳ್ಳಸಾಗಣೆಯಾಗಿದೆ; ಕಾಶ್ಮೀರ

ತೆರವುಗೊಳಿಸಬೇಕೆಂಬ ಬೇಡಿಕೆ; ತನ್ನ ಪಾತ್ರವನ್ನು ಪಾಕಿಸ್ತಾನ ನಿರಾಕರಿಸಿದೆ ಹಾಗೂ ಅಮೆರಿಕ ಧಾವಿಸಿದೆ; ಭಾರತ ಮತ್ತು ಪಾಕಿಸ್ತಾನ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ ; ಲಕ್ಷಾಂತರ ಜೀವಗಳೊಂದಿಗೆ ಚೆಲ್ಲಾಟವಾಗುವ ತೃತೀಯ ಮಹಾ ಯುದ್ಧ ಆರಂಭವಾಗಿದೆ…
ಇನ್ನೊಂದು ಪೋಸ್ಟ್  ಪ್ರಕಾರ, ಈ ಸಿನಿಮಾದ ಚಿತ್ರೀಕರಣ ಅಮೆರಿಕ, ಚೀನಾ, ರಷ್ಯಾ, ಯೆಮೆನ್ ಮತ್ತು ಭಾರತದಲ್ಲಿ ನಡೆಯಲಿದೆ ಎಂಬುದನ್ನು ವವರ್i ಬಹಿರಂಗಗೊಳಿಸಿದ್ದಾರೆ. ನ್ಯೂಕ್ಲಿಯರ್ ಬಾಂಬ್ ಸ್ಫೋಟಗೊಂಡು ಜನರು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಈ ಪೋಸ್ಟ್ ರ್‍ನಲ್ಲಿದೆ. ಸಿಎಂಎ ಗ್ಲೋಬಲ್ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಅಮೆರಿಕ, ಚೀನಾ, ರಷ್ಯಾ ಮತ್ತು ಭಾರತದ ನಟರು ನಟಿಸಲಿದ್ದಾರೆ. ಸರ್ಕಾರ್-3 ಚಿತ್ರೀಕರಣ ಮುಗಿಯುತ್ತಿದ್ದಂತೆ ನ್ಯೂಕ್ಲಿಯರ್ ಬಾಂಬ್ ಆರ್ಭಟದ ಶೂಟಿಂಗ್ ಆರಂಭವಾಗಲಿದೆ.

 

 

► Follow us on –  Facebook / Twitter  / Google+

Facebook Comments

Sri Raghav

Admin