ಅಂತರ್ಜಾತಿ ವಿವಾಹವಾದ ಮಗಳನ್ನು ಕೊಚ್ಚಿ ಕೊಂದ ಕಟುಕ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

Marriage-Murder--01

ಮುಂಬೈ, ಏ.7- ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕ್ರುದ್ಧನಾದ ತಂದೆಯೊಬ್ಬ ತನ್ನ 21 ವರ್ಷದ ಮಗಳನ್ನು ಭೀಕರವಾಗಿ ಕೊಲೆ ಮಾಡಿರುವ ದುರಂತ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ನಿಮ್‍ಖೇಡಾ ಗ್ರಾಮದಲ್ಲಿ ನಡೆದಿದೆ. ಬಾಬು ಶಿವಾರೆ ತನ್ನ ಪುತ್ರಿ ಮನೀಷಾ ಹಿಂಗನೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಏ.20ರಂದು ಈ ಯುವತಿಯ ಮದುವೆ ಶಿವಾರೆಯ ಸಂಬಂಧಿ ಯುವಕನ ಜೊತೆ ನಿಶ್ಚಯವಾಗಿತ್ತು.

ಮನೀಷಾ ಮತ್ತು ಅದೇ ಗ್ರಾಮದ ಅನ್ಯ ಜಾತಿಯ ಗಣೇಶ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಮನೆಗಳಿಂದ ಪರಾರಿಯಾಗಿದ್ದ ಇವರಿಬ್ಬರು ಮಾ.23ರಂದು ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಕೆಲವು ದಿನಗಳ ಕಾಲ ಬುಲ್ದಾನಾದ ಮಲ್ಕಾಪುರದಲ್ಲಿ ವಾಸವಾಗಿದ್ದರು.   ನಂತರ ಗ್ರಾಮಕ್ಕೆ ಹಿಂದಿರುಗಿದ್ದ ಮನೀಷಾ ಮತ್ತು ಗಣೇಶ ಪ್ರತ್ಯೇಕವಾಗಿ ನೆಲೆಸಿದ್ದರು. ಔಷಧಿ ಮಾರಾಟ ಪ್ರತಿನಿಧಿಯಾಗಿರುವ ಗಣೇಶ ಬುಧವಾರ ಕೆಲಸಕ್ಕೆ ಹೋಗಿದ್ದ. ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ವೇಳೆ ಮನೆಗೆ ನುಗ್ಗಿದ ಶಿವಾರೆ ಮಗಳನ್ನು ಕೊಡಲಿಯಿಂದ ಕತ್ತರಿಸಿ ಕೊಂದು ಹಾಕಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾದ. ಅತನನ್ನು ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin