ಅಂತಾರಾಜ್ಯ ಗನ್ ಸ್ಮಗ್ಲಿಂಗ್ ಜಾಲ ಬೇಧಿಸಿದ ದೆಹಲಿ ವಿಶೇಷ ಪೊಲೀಸ್ ಪಡೆ, 20 ಪಿಸ್ತೂಲ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Gunsmuggling

ನವದೆಹಲಿ, ಫೆ.16-ಅಂತಾರಾಜ್ಯ ಗನ್ ಕಳ್ಳಸಾಗಣೆ ಜಾಲವನ್ನು ಬೇಧಿಸಿರುವ ವಿಶೇಷ ಪೊಲೀಸ್ ಪಡೆ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 20 ಅತ್ಯಾಧುನಿಕ ಪಿಸ್ತೂಲುಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮಣಿಸಿಂಗ್ ಬಂಧಿತ ಆರೋಪಿಯಾಗಿದ್ದು, ಈತ ಕುಖ್ಯಾತ ಗನ್ ಕಳ್ಳಸಾಗಣೆದಾರ ರುಚ್‍ಪಾಲ್‍ಸಿಂಗ್‍ನ ಸಹೋದರ.   ಈ ಜಾಲವು ವಿವಿಧ ರಾಜ್ಯಗಳಲ್ಲಿ ಗನ್, ಪಿಸ್ತೂಲ್, ರಿವಾಲ್ವರ್‍ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಸುಳಿವರಿತು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವ್ಯವಸ್ಥಿತ ಜಾಲದ ಹಿಂದಿರುವ ಇತರರ ಬಂಧನಕ್ಕೆ ವ್ಯಾಪಕ ಬಲೆ ಬೀಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin