ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮಾನವರಹಿತ ನೌಕೆ ಸ್ಪೋಟ

ಈ ಸುದ್ದಿಯನ್ನು ಶೇರ್ ಮಾಡಿ

ISS

ಮಾಸ್ಕೋ, ಡಿ.2-ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‍ಎಸ್) ತೆರಳಿದ್ದ ಮಾನವರಹಿತ ಸರಕು ನೌಕೆಯೊಂದು ಅಂತರಿಕ್ಷ ವಾತಾವರಣದಲ್ಲಿ ಬೆಂಕಿಯುಂಡೆಯಾಗಿ ಸ್ಫೋಟಗೊಂಡಿದೆ.  ಐಎಸ್‍ಎಸ್‍ನಲ್ಲಿ ಈಗಾಗಲೇ ಪ್ರಯೋಗ ನಡೆಸುತ್ತಿರುವ ವ್ಯೂಮಾಯಾನಿಗಳ ತಂಡಕ್ಕೆ 2.4 ಟನ್‍ಗಳ ಇಂಧನ, ಆಹಾರ ಮತ್ತು ಇದರ ಸಾಧನ-ಉಪಕರಣಗಳನ್ನು ಹೊತ್ತೊಯ್ಯುತ್ತಿದ್ದ ಈ ಸರಕು ಸಾಗಣೆ ಮಾನವರಹಿತ ನೌಕೆಯು ಶನಿವಾರ ನಿಗದಿತ ಸ್ಥಳವನ್ನು ತಲುಪಬೇಕಾಯಿತು. ಆದರೆ ವಾತಾವರಣದಲ್ಲಿನ ಅಸಾಧಾರಣ ಸ್ಥಿತಿಯಿಂದಾಗಿ ನೌಕೆಯು ಉರಿದುಹೋಗಿ ಸ್ಪೋಟಗೊಂಡಿತು ಎಂದು ರಷ್ಯಾದ ಬ್ಯಾಹಾಕಾಶ ಸಂಸ್ಥೆ-ರೋಸ್‍ಕಾಸ್‍ಮೋಸ್ ತಿಳಿಸಿದೆ.

ಸೈಬೀರಿಯಾದ ಟುವಾ ಪ್ರಾಂತ್ಯದ ಜನವಸತಿ ಇಲ್ಲದ ಪರ್ವತಮಯ ಪ್ರದೇಶದಿಂದ ಮೇಲೆ ಸುಮಾರು 190 ಕಿ.ಮೀ. ದೂರದಲ್ಲಿ ಈ ನೌಕೆಯ ಸಂಪರ್ಕ ಕಡಿತಗೊಂಡಿತು. ಇದರ ಬಹುಪಾಲು ಭಾಗಗಳು ವಾತಾವರಣದ ದಟ್ಟ ಪದರಗಳಲ್ಲಿ ಸುಟ್ಟು ಭಸ್ಮವಾಯಿತು ಎಂದು ಅದು ಹೇಳಿಕೆಯೊಂದರಲ್ಲಿ ಹೇಳಿದೆ. 2015ರಲ್ಲೂ ಕೂಡ ಸರಕು ನೌಕೆಯೊಂದರ ಉಡಾವಣೆ ವಿಫಲಗೊಂಡಿತ್ತು. ಸುಯೇಜ್ ರಾಕೆಟ್‍ನಲ್ಲಿ ಕಾಣಿಸಿಕೊಂಡ ಸಮಸ್ಯೆಯೇ ಇದಕ್ಕೆ ಕಾರಣ ಎಂದು ರಷ್ಯಾ ಹೇಳಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin