ಅಂತಿಮ ಟೆಸ್ಟ್ : ಕ್ಲೀನ್‍ಸ್ವೀಪ್ ಸಾಧಿಸುವತ್ತ ಕೊಹ್ಲಿ ಪಡೆ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Virat Kohli
ಇಂದೋರ್, ಅ.7- ಲೋಧಾ ಹಾಗೂ ಬಿಸಿಸಿಐ ನಡು ವಿನ ಘರ್ಷಣೆ ನಡುವೇ ನಾಳೆ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡುವತ್ತ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ರಣತಂತ್ರವನ್ನು ರೂಪಿಸಿದ್ದಾರೆ.

ಮೂರನೇ ಕ್ಲೀನ್ ಸ್ವೀಪ್‍ಗೆ ಭಾರತ ಸಜ್ಜು:
ತವರು ನೆಲದಲ್ಲೇ ಭಾರತ ತಂಡವೇ ಸ್ಟ್ರಾಂಗ್ ಎಂಬುದನ್ನು ಸಾಬೀತು ಮಾಡಲು ನಾಳಿನ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಸರಣಿ ಜಯಸಿದರೆ ಟೀಂ ಇಂಡಿಯಾ 4 ವರ್ಷಗಳಲ್ಲಿ ಸತತ 3 ಕ್ಲೀನ್ ಸ್ವೀಪ್ ಮಾಡಿದ ಖ್ಯಾತಿಗೆ ಭಾಜನವಾಗಲಿದೆ.2012-13ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ 4-0 ವಿರುದ್ಧ ಸರಣಿ ಜಯಿಸಿದ್ದ ಭಾರತ, ಕಳೆದ ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ವಿರಾಟ್ ಕೊಹ್ಲಿಯ ಸಾರಥ್ಯದಲ್ಲೂ 4-0 ಯಿಂದ ಕ್ಲೀನ್ ಸ್ವೀಪ್ ಸಾಧಿಸಿತ್ತು. ಈಗ ಮತ್ತೆ ನ್ಯೂಜಿಲೆಂಡ್ ವಿರುದ್ಧ 3-0 ಕ್ಲೀನ್ ಸ್ವೀಪ್ ಮಾಡಲು ಕೊಹ್ಲಿ ಪಡೆ ಸಜ್ಜಾಗಿದೆ. ಇದೇ ಅಲ್ಲದೆ ಟೆಸ್ಟ್ ನಾಯಕತ್ವ ವಹಿಸಿಕೊಂಡ ನಂತರ ತವರಿನಲ್ಲಿ ನಡೆದ 14 ಪಂದ್ಯಗಳಲ್ಲಿ 12 ಪಂದ್ಯಗಳಲ್ಲಿ ಜಯ ಸಾಧಿಸಿರುವ ಕೊಹ್ಲಿಗೆ ನಾಳಿನ ಪಂದ್ಯವು ಮಹತ್ವದ್ದೆನಿಸಿದೆ.

ಮರಳಿದ ಕೇನ್ ವಿಲಿಯಮ್ಸ್:
ಎರಡನೇ ಟೆಸ್ಟ್ ಪಂದ್ಯದ ವೇಳೆ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದ ಕೇನ್ ವಿಲಿಯಮ್ಸ್ ನಿನ್ನೆ ನೆಟ್ಸ್ ಅಭ್ಯಾಸದಲ್ಲಿ ಕಾಣಿಸಿಕೊಂಡಿರುವುದರಿಂದ ಮೂರನೆ ಟೆಸ್ಟ್ ಆಡಲಿರುವುದರಿಂದ ಬ್ಯಾಟಿಂಗ್ ಬಲ ಹೆಚ್ಚಿದೆ.

ಬ್ಯಾಟ್ಸ್‍ಮನ್‍ಗಳದ್ದೇ ತಲೆನೋವು:
ನ್ಯೂಜಿಲೆಂಡ್ ಬಳಗದಲ್ಲಿ ರಾಸ್ ಟೇಲರ್, ಮಾರ್ಟಿನ್‍ಗುಪ್ಟಿಲ್‍ರಂತಹ ಅನುಭವಿ ಆಟಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ವಿಲಿಯಮ್ಸ್‍ಗೆ ತಲೆನೋವಾಗಿದ್ದರೂ ಕೂಡ ಲುಕ್ ರೋಂಚಿ, ಲ್ಯಾಥಮ್ ಉತ್ತಮ ಲಯದಲ್ಲಿರುವುದರಿಂದ ಅಂತಿಮ ಟೆಸ್ಟ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಲೆಕ್ಕಾಚಾರದಲ್ಲಿ ಕೇನ್ ವಿಲಿಯಮ್ಸ್ ಇದ್ದಾರೆ.

ಅಶ್ವಿನ್- ಜಡೇಜಾ ಸ್ಪಿನ್ ಮೋಡಿ:
ಕಾನ್ಪುರ ಹಾಗೂ ಕೋಲ್ಕತ್ತಾ ಪಿಚ್‍ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ರವಿಚಂದ್ರನ್ ಅಶ್ವಿನ್ (14 ವಿಕೆಟ್) ಹಾಗೂ ರವೀಂದ್ರ ಜಡೇಡಾ (10 ವಿಕೆಟ್) ಇಂದೋರ್‍ನಲ್ಲೂ ಸ್ಪಿನ್ ಮೋಡಿ ಮಾಡಲು ಸಜ್ಜಾಗಿದ್ದಾರೆ. ಆದರೆ ಕೋಲ್ಕತ್ತಾ ಟೆಸ್ಟ್‍ನಲ್ಲಿ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಭುವನೇಶ್ವರ್‍ಕುಮಾರ್ ಬೆನ್ನಿನ ತೊಂದರೆಯಿಂದ ಬಳಲುತ್ತಿರುವುದು ತಂಡಕ್ಕೆ ತುಸು ಹಿನ್ನೆಡೆಯಾದರೂ ಮೊಹಮದ್ ಶಮಿ ಹಾಗೂ ಉಮೇಶ್‍ಯಾದವ್ ವೇಗದ ಬೌಲಿಂಗ್ ಪಡೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಗಂಭೀರ್‍ಗೆ ಛಾನ್ಸ್:
ಎರಡು ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮರಳಲು ಹಾತೊರೆಯುತ್ತಿರುವ ಗೌತಮ್‍ಗಂಭೀರ್‍ಗೆ 11ರ ತಂಡದಲ್ಲಿ ಚಾನ್ಸ್ ದೊರೆಯುವುದು ಬಹುತೇಕ ಖಚಿತವಾಗಿದೆ.ಇಂದೋರ್‍ನಲ್ಲಿ ಶತಕ ಸಿಡಿಸುವರೇ..?ಭಾರತ ಹಾಗೂ ನ್ಯೂಜಿಲೆಂಡ್‍ನ ಮೊದಲೆರಡು ಟೆಸ್ಟ್‍ನಲ್ಲಿ ಯಾವೊಬ್ಬ ಬ್ಯಾಟ್ಸ್‍ಮನ್ ಶತಕ ಗಳಿಸದಿದ್ದರೂ ಕೂಡ ಬ್ಯಾಟಿಂಗ್‍ಗೆ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಇಂಧೋರ್ ಪಿಚ್‍ನಲ್ಲಾದರೂ ಶತಕ ಸಿಡಿಯುವುದೇ ಎಂಬುದನ್ನು ಕೂಡ ಕ್ರಿಕೆಟ್ ಪ್ರಿಯರು ಕಾದು ನೋಡುತ್ತಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin