ಅಂತ್ಯಕ್ರಿಯೆ ವೇಳೆ ಎದ್ದು ಕುಳಿತು ಶಾಕ್ ನೀಡಿದ ವ್ಯಕ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Dead--Man

ಯಾದಗಿರಿ, ಫೆ.23- ಅಂತ್ಯಕ್ರಿಯೆ ಸಿದ್ದತೆಯಲ್ಲಿದ್ದಾಗ ಶವವಾಗಿದ್ದ ವ್ಯಕ್ತಿ ಎದ್ದು ಕುಳಿತ ಎಂದರೆ ಸುತ್ತ ಇದ್ದವರೆಲ್ಲಾ ಏನಾಗಬೇಕು…? ಗಾಬರಿಗೊಂಡು ಎಲ್ಲರೂ ದೌಡಾಯಿಸಿದರು. ಈ ಘಟನೆ ನಡೆದದ್ದು ಸುರಪರ ತಾಲ್ಲೂಕಿನ ಮದಲಿಂಗನಾಳು ಗ್ರಾಮದಲ್ಲಿ. ಲಿಂಗಪ್ಪ ಸೋಮನಾಳು (54) ಚೇತರಿಸಿಕೊಂಡು ಎದ್ದು ಕುಳಿತ ವ್ಯಕ್ತಿ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆಯಾದರೂ ಸತ್ಯ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಲಿಂಗಪ್ಪರಿಗೆ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಲಾಗಿತ್ತು. ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದರು.

ಫೆ.19ರಂದು ಮನೆಗೆ ಕರೆತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆಂದು ಆ್ಯಂಬುಲೆನ್ಸ್ ಸಿಬ್ಬಂದಿ ಹೇಳಿದ್ದರು. ಬಳಿಕ 20ರಂದು ಅಂತ್ಯಕ್ರಿಯೆಗೆ ಕುಟುಂಬದವರು ಸಕಲ ಸಿದ್ದತೆ ಮಾಡಿಕೊಂಡಿದ್ದರು.   ಶವವೆಂದು ತಿಳಿದು ಹೊರ ಹಾಕಿ ರಾತ್ರಿಯಿಡೀ ಭಜನೆ ಮಾಡುತ್ತಾ ಸಂಬಂಧಿಕರು ಕುಳಿತಿದ್ದರು. ನಸುಕಿನ ಜಾವ 4 ಗಂಟೆ ಸುಮಾರಿಗೆ ಲಿಂಗಪ್ಪಸೋಮನಾಳು ಮೈ ಕೊಡುವಿಕೊಂಡು ಎದಿದ್ದಾರೆ. ಆಗ ಸುತ್ತ ಇದ್ದವರೆಲ್ಲಾ ಗಾಬರಿಗೊಂಡು ಓಡಿ ಹೋಗಿದ್ದಾರೆ. ಸಂಬಂಧಿಕರು ಹೋಗಿ ನೋಡಿದಾಗ ಇವರು ಬದುಕಿರುವುದು ಗೊತ್ತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin