ಅಂದರ್-ಬಾಹರ್ : ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrest

ಗೌರಿಬಿದನೂರು, ನ.28- ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಅಲಕಾಪುರ ಗ್ರಾಮದ ಹೊರವಲಯದಲ್ಲಿನ ಬಾಬಯ್ಯನ ತೋಪಿನಲ್ಲಿ ಅಂದರ್-ಬಾಹರ್ ಜೂಜಾಡುತ್ತಿರುವ ಬಗ್ಗೆ ಮಂಚೇನಹಳ್ಳಿ ಎಸ್‍ಐ ಮಂಜುನಾಥ್ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿ ಪಣಕ್ಕಿಟ್ಟಿದ್ದ 810 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.ಬಾಬಾಜಾನ್, ಇಮ್ರಾನ್, ದತ್ತು, ಸಿದ್ದೀಕ್ ಬಂಧಿತ ಆರೋಪಿಗಳು.ಗ್ರಾಮಗಳಲ್ಲಿ ಅಂದರ್-ಬಾಹರ್ ಇನ್ನಿತರೆ ಜೂಜಾಟಗಳು ನಡೆಯುತ್ತಿದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸುವ ಮೂಲಕ ಅಕ್ರಮ ದಂಧೆಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಎಸ್ ಮಂಜುನಾಥ್ ಮನವಿ ಮಾಡಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

 

 

Facebook Comments

Sri Raghav

Admin