ಅಂದರ್-ಬಾಹರ್ : 30 ಜನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrest
ಹುಬ್ಬಳ್ಳಿ,ಆ.29- ಸಾರ್ವಜನಿಕ ಸ್ಥಳದಲ್ಲಿ ರಾತ್ರಿಯಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ 30 ಮಂದಿಯನ್ನು ಪೊಲೀಸರು ದಾಳಿ ಮಾಡಿ ಬಂಧಿಸಿದ ಪ್ರಕರಣವೊಂದು ನಗರದ ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾವನೂರ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.ಹಳೇಹುಬ್ಬಳ್ಳಿಯ ಸದರ ಸೂಪಾ ನಿವಾಸಿ ಶಬ್ಬೀರ ನೂರಹ್ಮದ ವಡ್ಡು ಎಂಬಾತನ ಜೊತೆಗೆ ಸೇರಿಕೊಂಡು ಇಂದು ಬೆಳಗಿನ 2 ಗಂಟೆಗೆ ಹಳೇಹುಬ್ಬಳ್ಳಿ ಮಾವನೂರ ರೋಡ ಫತೇಶಾವಲಿ

ಹಾಲ್ ಮುಂದುಗಡೆಯ ಬಯಲು ಜಾಗೆಯಲ್ಲಿ ಕುಳಿತುಕೊಂಡು ಅಂದರ ಬಾಹರ ಜೂಜಾಟ ಆಡುತ್ತಿರುವಾಗ ಖಚಿತ ಮಾಹಿತಿಯೊಂದಿಗೆ ಕಸಬಾಪೇಟ್ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದು, 8600 ರೂ. ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಜರುಗಿಸಿದ್ದಾರೆ. ಬಗ್ಗೆ ಪೊಲೀಸ್ ಅಧಿಕಾರಿಯವರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಕೊಳ್ಳಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin