ಅಂಧ ಕಲಾವಿದರಿಗೆ ಸರ್ಕಾರ ನೆರವು ನೀಡಲಿ : ರಘು ರಾಮರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

bagepalli

ಬಾಗೇಪಲ್ಲಿ,ನ.12- ದೇಶದಲ್ಲಿ ಅನೇಕ ಮಂದಿ ಅಂಧ ಕಲಾವಿದರು, ಸಂಸ್ಥೆಗಳು ಇದ್ದರೂ, ಜನಪ್ರತಿನಿಧಿ ಮತ್ತು ಸರ್ಕಾರಗಳಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿಲ್ಲ. ಇದರಿಂದ ಅಂಧ ಕಲಾವಿದರು ಕೈ ಚಾಚಿ ಕೇಳಿಕೊಂಡು, ಬೀದಿಗಳಲ್ಲಿ ಡಬ್ಬಗಳು ಹಿಡಿದು ಕಲಾ ಪ್ರದರ್ಶನ ಮಾಡಿ ಜೀವನ ಸಾಗಿಸಬೇಕಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸ್‍ವಾದ) ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಬೇಸರ ವ್ಯಕ್ತಪಡಿಸಿದರು. ತಾಲ್ಲೂಕು ಕಚೇರಿ ಮುಂದೆ ಕನ್ನಡ ಸೇನೆ-ಕರ್ನಾಟಕ ತಾಲ್ಲೂಕು ಘಟಕ ಹಾಗೂ ಬಾಬಾ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜೋತ್ಸವ ಹಾಗೂ ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಅಂಧ ಕಲಾವಿದರಿಂದ ರಸಸಂಜೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಸುಖ ಸಂಪತ್ತಿನಲ್ಲಿ ತಿಂದು, ಮಿಂದುತ್ತಿರುವ ಅನೇಕ ಶ್ರೀಮಂತರಿಗೂ ಅಂಧ ಕಲಾವಿದರು ಕಾಣಿಸಲಿಲ್ಲವೇ? ಕನಿಷ್ಠ ಅಲ್ಪ ನೆರವು ನೀಡಲು ಮನಸ್ಸಿಲ್ಲವೇ?. ಸೃಷ್ಠಿಯಲ್ಲಿ ಅಂಧರಿಗೂ ಜೀವನ ಇದೆ. ಕಲೆ, ಓದುವ ಶಕ್ತಿ ಇದೆ. ಬದುಕಲು ಸಾಧ್ಯವಾಗದ, ಅಂಧ ಕಲಾವಿದರಿಗೆ ಹಾಗೂ ಅಂಧ ಸಂಸ್ಥೆಗಳಿಗೆ ಜನಪ್ರತಿನಿಧಿಗಳು, ಸರ್ಕಾರಗಳು ನೆರವು ಕಲ್ಪಿಸಬೇಕು ಎಂದು ಮನವಿ ಮಾಡಿದರು. ಅನೇಕ ಜಾತಿ, ಧರ್ಮಗಳ ಸ್ವಾತಂತ್ರ್ಯ ಹೋರಾಟಗಾರರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಜಾತಿ, ಧರ್ಮಗಳ ನಡುವೆ ಕೋಮುವಾದಿ ಸೃಷ್ಠಿಸಿ ದೇಶದಲ್ಲಿ ಕೋಮು ಗಲಭೆ ಗಳು ಸೃಷ್ಠಿಸುವ ವಾತಾವರಣ ನಿರ್ಮಾಣವಾಗುತ್ತಿರುವುದು ಖಂಡನಾರ್ಹವಾಗಿದೆ ಎಂದು ತಿಳಿಸಿದರು.

ಟಿಪ್ಪು ಸುಲ್ತಾನ್ ದೇಶಿಪ್ರೇಮಿ. ಮಸೀದಿಗಳ ಜೊತೆಗೆ ಮಠಗಳು, ದೇವಾಲಯಗಳನ್ನು ಉಳಿಸಿದ್ದಾರೆ. ಬ್ರಿಟಿಷರು ಕರ್ನಾಟಕದ ಪ್ರದೇಶಗಳ ಮೇಲೆ ದಾಳಿ ಮಾಡಿದಾಗ, ಶೃಂಗೇರಿ ಮಠ, ನಂಜುಂಡೇಶ್ವರ ದೇವಸ್ಥಾನಗಳು ಸೇರಿದಂತೆ ದೇವಾಲಯಗಳನ್ನು ಉಳಿಸಿ ಬೆಳಿಸಿದ್ದಾರೆ ಎಂದು ತಿಳಿಸಿದರು.ಪುರಸಭಾ ಮಾಜಿ ಸದಸ್ಯ ಮಹಮದ್ ಎಸ್.ನೂರುಲ್ಲಾ ಮಾತನಾಡಿ ಟಿಪ್ಪು ಸುಲ್ತಾನ್ ದೇಶ ಹಾಗೂ ನಾಡಪ್ರೇಮಿ ಅಲ್ಲ ಎಂದರೆ, ಕರ್ನಾಟಕದ ಸಾರ್ವಭೌಮ, ಉಳಿಸಲು ತಮ್ಮ ಮಕ್ಕಳನ್ನು ಒತ್ತೆ ಇಟ್ಟಿದ್ದರು. ಇಂತಹಾ ಮಹಾ ಪುರುಷ ಟಿಪ್ಪುಸುಲ್ತಾನನ ಬಗ್ಗೆ ಇತಿಹಾಸ ತಿಳಿದುಕೊಂಡು ಮಾತನಾಡಲಿ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕೋಮುವಾದಿಗಳು, ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಹುನ್ನಾರ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಆಶ್ರೇಯ ಅಂಧ ಕಲಾವಿದರ ಸಂಸ್ಥೆಯ ಅಂಧ ಕಲಾವಿದರಾದ ಕಾರ್ತಿಕ್, ವೀರಪ್ಪ, ಸವಿತಾ, ಮುಸ್ಟೂರಪ್ಪ ಸೇರಿದಂತೆ ಅನೇಕ ಕಲಾವಿದರಿಂದ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ , ಸೇರಿದಂತೆ ಕವಿ, ವಚನಕಾರರರನ್ನು ಹಾಗೂ ಸಾಹಿತ್ಯದ ದಿಗ್ಗಜರನ್ನು ಸ್ಮರಿಸುವ, ಕರ್ನಾಟಕದ ಇತಿಹಾಸ ಹಾಗೂ ಭವ್ಯ ಶಿಲ್ಪಕಲೆಗಳನ್ನು ಸಾರುವ ಕನ್ನಡ ಚಲನಚಿತ್ರಗೀತೆಗಳು, ಶಿಶುನಾಳ ಷರೀಫರ ಗೀತೆಗಳನ್ನು ಹಾಡಿ, ನೆರೆದ ಜನರನ್ನು ಆಕರ್ಷಿಸಿದರು. ಕನ್ನಡ ಸೇನೆ-ಕರ್ನಾಟಕ ತಾಲ್ಲೂಕು ಘಟಕದ ವತಿಯಿಂದ ಅನ್ನದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಸೇನೆ ಕರ್ನಾಟಕದ ತಾಲ್ಲೂಕು ಕಾರ್ಯದರ್ಶಿ ರವೀಂದ್ರ, ಕರಾಟೆರಿಯಾಜ್, ಬಾಬಾಜಾನ್, ವೆಂಕಟಶಿವಪ್ಪ, ಆರೀಫ್, ಮುದ್ದುಕೃಷ್ಣ, ಶಬ್ಬೀರ್ ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin