ಅಂಬಾನಿ, ಅದಾನಿಯಿಂದ ಯಾವುದೇ ಲಾಭವಿಲ್ಲ : ಕೇಜ್ರಿವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Arvind

ನವದೆಹಲಿ, ಆ.18-ರಾಜ್ಯ ಸರ್ಕಾರಿ ನೌಕರರ ಸಮರ್ಥಿಸಿಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹಣವು ಬಡವರು ಮತ್ತು ಮಧ್ಯಮ ವರ್ಗದವರ ಕೈಯಲ್ಲಿರಬೇಕೇ ಹೊರತು ಅಂಬಾನಿ ಮತ್ತು ಆದಾನಿಯಲ್ಲಿರುವುದರಿಂದ ದೇಶದ ಆರ್ಥಿಕತೆಗೆ ಯಾವುದೇ ಲಾಭವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.   ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಾವೇ ಅಧಿಕಾರರೂಢವಿರುವ ರಾಜ್ಯಗಳಲ್ಲಿ ಇಂತಹ ತೀರ್ಮಾನ ತೆಗೆದುಕೊಳ್ಳುವ ಧೈರ್ಯ ತೋರಲಿವೆಯೇ ಎಂದು ಪ್ರಶ್ನಿಸಿದರು. ಮುಷ್ಕರ ನಡೆಸಿ ದೇಶಾದ್ಯಂತ ವಹಿವಾಟು ಸ್ಥಗಿತಗೊಳಿಸುವುದರಿಂದ ಯಾವುದೇ ಮುಷ್ಕರ ನಿರತ ಸಂಘಟನೆಗಳಿಗೆ ಲಾಭವಾಗುವುದಿಲ್ಲ. ಬಡವರಿಗೆ ಹಣ ತಲುಪಿದಾಗ ದೇಶದ ಆರ್ಥಿಕತೆ ಚೇತರಿಕೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ದೇಶದ ಆರ್ಥಿಕ ನೀತಿಗಳು ಬಡವರಿಗೆ ಲಾಭವಾಗುವಂತಿರಬೇಕು. ದೈನಂದಿನ ವೆಚ್ಚದಲ್ಲಿ ಹೆಚ್ಚಳವಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ದೀರ್ಘಾವಧಿಯಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಲಾಭವಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin