ಅಂಬಿಗೆ ಬೇಡದ ಮಂಡ್ಯ ಕಾಂಗ್ರೆಸ್ ಟಿಕೆಟ್ ಗಣಿಗ ರವಿ ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Gani-Ravi--022

ಬೆಂಗಳೂರು, ಏ.24- ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರದ ಟಿಕೆಟ್, ಯುವ ಮುಖಂಡ ಗಣಿಗ ರವಿ ಅವರಿಗೆ ಸಿಕ್ಕಿದೆ. ಅಂಬರೀಶ್‍ಗೆ ಟಿಕೆಟ್ ಘೋಷಣೆಯಾಗಿದ್ದರೂ ಬಿ ಫಾರಂ ಪಡೆಯದೆ ಮೀನಾಮೇಷ ಎಣಿಸುತ್ತಿದ್ದ ಅಂಬರೀಶ್ ಅವರು ಕೊನೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಗಣಿಗ ರವಿ ಅವರಿಗೆ ಪಕ್ಷ ಬಿ ಫಾರಂ ನೀಡಿದ್ದು, ಇಂದು ಮಧ್ಯಾಹ್ನ ಅವರು ನಾಮಪತ್ರ ಸಲ್ಲಿಸಿದರು.

ಟಿಕೆಟ್ ಘೋಷಣೆಯಾದ ಮೇಲೆ ಅಂಬಿಗೆ ಬಿ ಫಾರಂ ಪಡೆಯುವಂತೆ ಸೂಚಿಸಿದ್ದರೂ ಅಂಬಿ ಬಿ ಫಾರಂ ಪಡೆದಿರಲಿಲ್ಲ. ಅವರ ಮನವೊಲಿಸುವ ಯತ್ನ ಮಾಡಲಾಯಿತು. ಖುದ್ದು ಸಚಿವ ಕೆ.ಜೆ.ಜಾರ್ಜ್, ಅಂಬರೀಶ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರೂ ಒಪ್ಪಿರಲಿಲ್ಲ. ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಲು ಮಾಡಿದ ಪ್ರಯತ್ನ ಕೂಡ ವಿಫಲವಾಗಿತ್ತು. ಕೊನೆ ಕ್ಷಣದವರೆಗೆ ಅವರು ಬಿ ಫಾರಂ ಪಡೆದಿರಲಿಲ್ಲ.   ಗಣಿಗ ರವಿ ಅವರ ಪರವಾಗಿ ಮಂಡ್ಯದ ಅನೇಕ ಕಾಂಗ್ರೆಸ್ ಮುಖಂಡರು ಲಾಬಿ ಕೂಡ ನಡೆಸಿದ್ದರು. ಕೊನೆಗೆ ಅಂಬರೀಶ್ ಅವರು ಚುನಾವಣಾ ಕಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್, ಗಣಿಗ ರವಿ ಅವರಿಗೆ ಬಿ ಫಾರಂ ನೀಡಿದೆ.

Facebook Comments

Sri Raghav

Admin