ಅಂಬೇಡ್ಕರ್ ನಿಗಮದಲ್ಲಿ ಖಾಲಿ ಇರುವ 371 ಸಿಬ್ಬಂದಿಗಳ ಶೀಘ್ರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Mallajamma

ಬೆಂಗಳೂರು, ಆ.22- ಡಾ.ಬಿ.ಆರ್. ಅಂಬೇಡ್ಕರ್ ನಿಗಮ ದಲ್ಲಿ ಖಾಲಿ ಇರುವ 371 ಸಿಬ್ಬಂದಿಗಳ ನೇಮಕಾತಿಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ನಿಗಮ ಮಂಡಳಿ ಅಧ್ಯಕ್ಷೆ ಮಲ್ಲಾಜಮ್ಮ ತಿಳಿಸಿದ್ದಾರೆ.  ಕಳೆದ ಹಲವು ವರ್ಷಗಳಿಂದ ನಿಗಮ ಮಂಡಳಿಯಲ್ಲಿ ಸಿಬ್ಬಂದಿಗಳ ನೇಮಕಾತಿ ಕೊರತೆ ಉಂಟಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ಜೊತೆ ಚರ್ಚಿಸಿ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಎಎಂ) ಮೂಲಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮನವಿ ಮಾಡಲಾಗಿದೆ. ಅವರು ಕೆಪಿಎಸ್ಸಿ ಮೂಲಕ ನೇಮಕಾತಿ ವಿಳಂಬವಾಗು ಬಹುದೆಂಬ ಹಿನ್ನೆಲೆಯಲ್ಲಿ ಐಎಎಂಗೆ ಪತ್ರ ಬರೆಯುತ್ತೇನೆ. ಇದುವರೆಗೂ ಅವರು ನೇಮಕಾತಿಗೆ ಒಪ್ಪಿಕೊಂಡಿಲ್ಲ. ಆದರೂ ಪುನಃ ಮನವಿಮಾಡುವುದಾಗಿ ತಿಳಿಸಿದರು.

ಕೆಲಸ ತೃಪ್ತಿ ತಂದಿದೆ: ನನ್ನ 20 ತಿಂಗಳ ಅಧಿಕಾರಾವಧಿಯಲ್ಲಿ ಸಮುದಾಯಕ್ಕೆ ಒಳ್ಳೆಯ ಕೆಲಸ ಮಾಡಿದ್ದೇನೆ. ಕಳೆದ ಸಾಲಿನ ಬಜೆಟ್ನಲ್ಲಿ ನಮ್ಮ ಮಂಡಳಿಗೆ 450 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.  ದಲಿತ ಸಮುದಾಯದಲ್ಲಿ 101 ಉಪಜಾತಿಗಳು ಬರಲಿದೆ. ಇದರಲ್ಲಿ ಫಲಾನುಭವಿಗಳಿವೆ ಕೊಳವೆಬಾವಿ, ಸ್ವಯಂ ಉದ್ಯೋಗ, ವಿಕಲಚೇತನರಿಗೆ ಸಾಲ ವಿತರಣೆ ಸೇರಿದಂತೆ ಮತ್ತಿತರ ಫಲಾನುಭವಿಗಳ ಮಂಡಳಿಯಿಂದ ವಿವಿಧ ರೀತಿಯ ಸವಲತ್ತುಗಳನ್ನು ಒದಗಿಸಲಾಗುವುದಾಗಿ ಮಲ್ಲಾಜಮ್ಮ ವಿವರಿಸಿದರು.

224 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನು ಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಮೂಲಕ 30 ಜಿಲ್ಲೆಗಳಲ್ಲಿ ಮೀಸಲಾತಿ ಮೂಲಕವೇ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.   ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಗುಲ್ಬರ್ಗಾ ಮತ್ತಿತ ರೆಡೆ ಮಂಡಳಿಯ ನಿವೇಶನಗಳನ್ನು ಸ್ಥಾಪಿಸಲಾಗಿದೆ. ಹಾಸನದಲ್ಲಿ ಈಗಾಗಲೇ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿ ಕೇಂದ್ರ ಕಚೇರಿ ಸ್ಥಾಪಿಸುವ ನಿರ್ಧಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
12 ಜಿಲ್ಲೆಗಳಲ್ಲಿ ವಾಹನ ಸೌಲಭ್ಯ ಒದಗಿಸಲಾಗಿದೆ. ಸಿಬ್ಬಂದಿ ನೇಮಕ ಮಾಡಿಕೊಳ್ಳುವ ವೇಳೆ ಹೈದರಾಬಾದ್-ಕರ್ನಾಟಕ ಸಿಬ್ಬಂದಿ ನೇಮಕಾತಿಯ ಶೇ.75ರಷ್ಟು ಮಂದಿಯನ್ನು ಆ ಭಾಗಕ್ಕೆ ಮೀಸಲಿಡಲಾಗುವುದು.

30 ಜಿಲ್ಲೆಯಲ್ಲಿ ದಲಿತರ ನಡುವೆ ಸಂವಾದ ನಡೆಸಿ ಅವರಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ಸವಲತ್ತುಗಳನ್ನು ತಲುಪಿಸುವಂತೆ ಮಾಡಲಾಗುವುದು ಎಂದು ತಿಳಿಸಿದರು.  ಮುಂದಿನ ಬಜೆಟ್ನಲ್ಲಿ ನಮ್ಮ ಮಂಡಳಿಗೆ 2,500 ಕೋಟಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗಿದೆ. ಮಾಡಿರುವ ಕೆಲಸ ನನಗೆ ತೃಪ್ತಿ ತಂದಿರುವ ಹಿನ್ನೆಲೆಯಲ್ಲಿ ಪುನಃ ನನ್ನನ್ನೇ ಅಧಿಕಾರದಲ್ಲಿ ಮುಂದುವರೆಸುವಂತೆ ಯಾವುದೇ ಲಾಬಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin