ಅಕ್ಕಮಹಾದೇವಿ ಹೆಸರು ನಾಮಕರಣಕ್ಕೆ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

 belagam4
ಗದಗ,ಸೆ.22-
ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣಗೊಳಸಲು ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದನ್ನು, ಅವ್ವ ಸೇವಾ ಟ್ರಸ್ಟ್ ಹಿರಿಯ ಸದಸ್ಯ ಚಿಂತಕ ನಿವೃತ್ತ ಇಂಜಿನೀಯರ್ ಬಸವರಾಜ ಚಿತ್ತರಗಿ ಸ್ವಾಗತಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಸರ್ವಾಂಗೀಣ ಉನ್ನತಿಗಾಗಿ ಹಾಗೂ ಉನ್ನತ ಶಿಕ್ಷಣ ಸಂಶೋಧನೆಯಲ್ಲಿ ಪ್ರಗತಿ ಸಾಧಿಸುವಂತೆ ಹಾಗೂ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡಲು, ಮಹಿಳಾ ಸಬಲೀಕರಣಕ್ಕಾಗಿ ಅವರ ಸಾಧನೆ ಸೇವೆಯನ್ನು ದಾಖಲೀಕರಿಸಲು ಒತ್ತು ನೀಡುವ ಉದ್ದೇಶದಿಂದ ವಿಜಯಪುರ ದಲ್ಲಿ 2003-04 ಶೈಕ್ಷಣಿಕ ವರ್ಷದಿಂದ ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.
ಈ ವಿಶ್ವವಿದ್ಯಾಲಯಕ್ಕೆ ಶ್ರೇಷ್ಠ ಮಹೋನ್ನತ ಹಾಗೂ ಐತಿಹಾಸಿಕ ಮಹಿಳಾ ಸಂತರ ಹೆಸರಿಡಲು ಅನೇಕ ಕೋರಿಕೆಗಳು ಒತ್ತಾಯಗಳು ಆರಂಭವಾಗಿದ್ದವು ಮಧ್ಯಯುಗದ ಕಾಲಘಟ್ಟದಲ್ಲಿ ಕನ್ನಡದ ಶ್ರೇಷ್ಠ ಸಾಹಿತಿ, ಸಮಾಜಿಕ ಕ್ರಾಂತಿಕಾರಿ ಹಾಗು ಅನುಭಾವಿಯಾಗಿದ್ದ 12ನೇ ಶತಮಾನದ ಸಾಮಾಜಿಕ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಿವಶರಣೆ ಅಕ್ಕಮಹಾದೇವಿಯವರು ನೀತಿ ಬೋಧನೆಯ ಕಾವ್ಯ ಪ್ರಕಾರವಾದ ವಚನಗಳ ಮೂಲಕ ಕನ್ನಡ ಭಕ್ತಿ, ಭಾವನಾತ್ಮ ಸಾಹಿತ್ಯಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದು ಸ್ಮರಣೀಯ.
2014ನೇ ಡಿಶೆಂಬರ್‍ನಲ್ಲಿ ವಿಜಯಪುರದಲ್ಲಿ ನಡೆದ ಅಖಿಲಭಾರತ 12ನೇ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅಕ್ಕಮಹಾದೇವಿಯವರ ಹೆಸರನ್ನು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಇಡುವ ಸಂಬಂಧ ಸರ್ಕಾರಕ್ಕೆ ಕೋರಿ ಗೊತ್ತುವಳಿಯನ್ನು ಅಂಗೀಕರಿಸಲಾಗಿದ್ದನ್ನು ಸ್ಮರಿಸಬಹುದು.
ಮಧ್ಯಯುಗದ ಕಾಲಘಟ್ಟದಲ್ಲಿ ಅಕ್ಕಮಹಾದೇವಿಯವರು ಶ್ರಮಿಸಿದ ಮಹಿಳೆಯರ ಸಬಲೀಕರಣದ ಹಾಗೂ ಜಾಗತೀಕರಣದ ಮನ್ವಂತರದ ಸವಾಲುಗಳನ್ನು ಎದುರಿಸಲು ಮಹಿಳೆಯನ್ನು ಸಶಕ್ತಗೊಳಿಸುವ ಸಲುವಾಗಿ ಸ್ಥಾಪನೆಗೊಂಡಿರುವ ಈ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ಮರು ನಾಮಕರಣಗೊಳಿಸುವಲ್ಲಿ ವಿಶೇಷ ಆಸಕ್ತಿ ಕಾಳಜಿವಹಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಮಾಜಿ ಸಚಿವ ವಿಧಾನ ಪರಿಷತ್ತ ಹಿರಿಯ ಸದಸ್ಯ ಹಾಗೂ ಅವ್ವ ಸೇವಾ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಹೊರಟ್ಟಿಯವರಿಗೆ ಸಮಸ್ತ ಕನ್ನಡನಾಡಿನ ಮಹಿಳೆಯರ ಪರವಾಗಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಸೇರಿದಂತೆ ಎಲ್ಲ ಶರಣರ ಸಮುದಾಯದ ಪರವಾಗಿ ಅವ್ವ ಸೇವಾ ಟ್ರಸ್ಟಿನ ಸರ್ವ ಸದಸ್ಯರ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ.ಬಸವರಾಜ ಧಾರವಾಡ, ಬಸವರಾಜ ನೆಲವಗಿ, ಡಿ.ಬಿ.ಹುಯಿಲಗೋಳ, ವೆ.ಮೂ ಕಲ್ಲಯ್ಯಜ್ಜ ಹಿರೇಮಠ, ಸಿದ್ದಣ್ಣ ಮಾರನಬಸರಿ, ಗಣೇಶಸಿಂಗ್ ಬ್ಯಾಳಿ, ಎಸ್.ಟಿ.ಬ್ಯಾಕೋಡ್, ಪ್ರಾ.ಯಶೋದಾ ಹಿರೇಗೌಡ್ರ, ಜಯಲಕ್ಷ್ಮೀ ಅಣ್ಣಿಗೇರಿ, ಗಾಯತ್ರಿ ವಸ್ತ್ರದ, ಪ್ರಭಾವತಿ ಕೊಟಗಿ, ಪಾರ್ವತಿ ಅವರಡ್ಡಿ, ಎಸ್.ಎಂ,ಕೊಟಗಿ, ಸಿದ್ದಣ್ಣ ಚಿತ್ತರಗಿ, ಎಸ್.ಎಂ.ಅಗಡಿ, ಎಸ್.ಎಂ.ಗಡ್ಡದ, ಎಸ್.ಎಂ.ಹೊಸಮಠ, ಎಂ.ಕೆ.ಲಮಾಣಿ, ಎ.ಎಸ್.ಪಾಟೀಲ, ಎಚ್.ಎಸ್.ಅಬ್ಬಿಗೇರಿ, ಬಿ.ಆರ್.ಪಾಟೀಲ, ಬಿ.ಕೆ.ಭಜಂತ್ರಿ, ಎಸ್.ಬಿ.ಪಾಟೀಲ ಬಿ.ಕೆ.ಪಾಟೀಲ ಮುಂತಾದವರಿದ್ದರು.

 

Follow us on –  Facebook / Twitter  / Google+

Facebook Comments

Sri Raghav

Admin