ಅಕ್ಕ ಸಮ್ಮೇಳನ ತೆರಳಿಲಿರುವ 46 ಗಣ್ಯರಿಗೆ ಒಂದೇ ಬಾರಿ ವೀಸಾ

ಈ ಸುದ್ದಿಯನ್ನು ಶೇರ್ ಮಾಡಿ

Akka

ಬೆಂಗಳೂರು, ಸೆ.2- ಅಮೆರಿಕದ ನ್ಯೂ ಜೆರ್ಸಿಯಲ್ಲಿ ಇಂದಿನಿಂದ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ವಿವಿಧ ಕ್ಷೇತ್ರಗಳ 46 ಗಣ್ಯರಿಗೆ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ವತಿಯಿಂದ ಒಂದೇ ಬಾರಿ ಅಮೆರಿಕ ವೀಸಾ ದೊರೆತಿದೆ.  ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಾ.ಡಿ.ಪ್ರಕಾಶ್ ನೇತೃತ್ವದಲ್ಲಿ 16 ದಿನಗಳ ಅಮೆರಿಕ ಪ್ರವಾಸಕ್ಕೆ 46 ಜನರ ತಂಡ ತೆರಳಲಿದೆ.  ನ್ಯೂ ಜೆರ್ಸಿಯಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನ ಹಾಗೂ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಕನ್ನಡ ಬಳಗ ಮತ್ತು ಕುವೆಂಪು ಕಲಾನಿಕೇತನ ಸಂಯುಕ್ತಾಶ್ರಯದಲ್ಲಿ ಸೆ.10ರಂದು ಕುವೆಂಪು ಕಲಾ ಉತ್ಸವದಲ್ಲಿ ಪಾಲ್ಗೊಳ್ಳಲು ಕುಪ್ಪೂರು ಗದಿಗೆ ಮಠದ ಡಾ.ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ತಂಡ, ಮಾನಸ ಗ್ರೂಪ್ ಛೇರ್ಮನ್ ಡಾ.ಆನಂದ್ಕುಮಾರ್ರವರ ತಂಡ, ಜನತಾಸೇವಾ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ರಾಮುರವರ ತಂಡ ಅಮೆರಿಕಕ್ಕೆ ತೆರಳಲಿದೆ. ಈ ಎಲ್ಲ 46 ಜನರಿಗೆ ಅಮೆರಿಕ ವೀಸಾ ಒಂದೇ ಬಾರಿ ದೊರೆತಿದ್ದು ವಿಶೇಷ.

► Follow us on –  Facebook / Twitter  / Google+

Facebook Comments

Sri Raghav

Admin