ಅಕ್ಟೋಬರ್ ತಿಂಗಳಲ್ಲಿ ‘ರಜೆ ಹಬ್ಬ’ : ಸರ್ಕಾರಿ ಮತ್ತು ಬ್ಯಾಂಕ್ ನೌಕರರರಿಗೆ ಬರೋಬ್ಬರಿ 14 ದಿನ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

October

ಬೆಂಗಳೂರು, ಸೆ.29- ಮುಂದಿನ ತಿಂಗಳಿನಲ್ಲಿ ಒಟ್ಟೊಟ್ಟಿಗೆ ದಸರಾ ಹಾಗೂ ದೀಪಾವಳಿ ಹಬ್ಬ ಆಗಮಿಸಿದ್ದು, ಸರ್ಕಾರಿ ನೌಕರರಿಗೆ ಸಾಲು ಸಾಲು ರಜೆ ದೊರೆಯಲಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವವನ್ನು ಸೇರಿಸಿದರೆ ಒಟ್ಟಿಗೆ 14 ದಿನಗಳ ರಜಾ ಭಾಗ್ಯ ಸರ್ಕಾರಿ ಮತ್ತು ಬ್ಯಾಂಕ್ ನೌಕರರ ಪಾಲಿಗಿದೆ. ಇನ್ನು ಐಟಿ ಉದ್ಯೋಗಿಗಳ ಪಾಲಿಗೂ ಒಟ್ಟೊಟ್ಟಿಗೆ ನಾಲ್ಕಾರು ರಜೆಗಳು ಕಾದಿದ್ದು, ಹಬ್ಬಗಳ ಅಂದ ಹೆಚ್ಚಿಸಿದೆ. ಅ.2 ಭಾನುವಾರ, 8ರಂದು 2ನೇ ಶನಿವಾರ, 9 ಭಾನುವಾರ, 10 ಆಯುಧಪೂಜೆ, 11 ವಿಜಯದಶಮಿ, 12 ಮೊಹರಂ, 15 ವಾಲ್ಮೀಕಿ ಜಯಂತಿ, 16 ಭಾನುವಾರ. ಇನ್ನು 22ರಂದು 4ನೆ ಶನಿವಾರ, 23 ಭಾನುವಾರ, 29ರಂದು ನರಕ ಚರ್ತುದಶಿ, 30 ಭಾನುವಾರ, 31 ಬಲಿಪಾಡ್ಯಮಿ ಹಾಗೂ ನ. 1ರಂದು ಕನ್ನಡ ರಾಜ್ಯೋತ್ಸವ. ಎಲ್ಲಾ ಸೇರಿ ಒಟ್ಟು 14 ದಿನಗಳ ರಜೆ ಸವಿಯುವ ಸವಿಯುವ ಭಾಗ್ಯ ಲಭ್ಯವಾಗಲಿದೆ.

ಇನ್ನು ಬ್ಯಾಂಕ್‍ಗಳು 13 ದಿನ ಬಂದ್ ಆಗಲಿದ್ದು, 4 ಶನಿವಾರಗಳಲ್ಲಿ ಒಂದು ಶನಿವಾರ ಮಾತ್ರ ಕೆಲಸ ನಿರ್ವಹಿಸಲಿವೆ. ಹೀಗಾಗಿ ಸಾರ್ವಜನಿಕರು ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಸರಿಯಾದ ಸಮಯಕ್ಕೆ ಮುಗಿಸಿಕೊಳ್ಳುವುದು ಒಳಿತು.  ಇನ್ನು ಸಾಲು-ಸಾಲು ಹಬ್ಬಗಳನ್ನು ಊರುಗಳಲ್ಲಿ ಆಚರಿಸಿಕೊಳ್ಳುವವರಿಗೆ ಒಳ್ಳೆಯ ಅವಕಾಶ ಇದೆ. ನಿಮ್ಮ ಟಿಕೆಟ್‍ಗಳನ್ನು ಈಗಲೇ ಕಾಯ್ದಿರಿಸಿಕೊಳ್ಳುವುದು ಉತ್ತಮ.

► Follow us on –  Facebook / Twitter  / Google+

Facebook Comments

Sri Raghav

Admin