ಅಕ್ರಮವಾಗಿ ಮರಳು ಸಾಗಾಣೆ : ಮಣ್ಣು ಕುಸಿದು ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಮಾ.20- ಅಕ್ರಮವಾಗಿ ಮರಳು ಸಾಗಾಣೆ ವೇಳೆ ಮರಳು ತುಂಬಲು ಮುಂದಾದ ವ್ಯಕ್ತಿಯೊಬ್ಬ ಮಣ್ಣು ಕುಸಿದು ಮೃತಪಟ್ಟಿರುವ ಘಟನೆ ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಶಿವರಾಮ್(45) ಮೃತ ದುರ್ದೈವಿ. ಇಂದು ಬೆಳಗಿನ ಜಾವ 3 ಗಂಟೆಯಲ್ಲಿ ತಾಲ್ಲೂಕಿನ ಈರೋಡು ಕೆರೆಯಲ್ಲಿ ಅಕ್ರಮವಾಗಿ ಮರಳು ತುಂಬುವಾಗ ಮರಳು ಕುಸಿದು ಸ್ಥಳದಲ್ಲೇ ಅಸುನೀಗಿದ್ದಾನೆ. ಈ ಸಂಬಂಧ ಪಾಂಡವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin