ಅಕ್ರಮವಾಗಿ ಸಾಗಿಸುತ್ತಿದ್ದ 70 ಚೀಲ ಅಮೋನಿಯಂ ನೈಟ್ರೇಟ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Amonium

ಬಾಗಲಕೋಟೆ, ಸೆ.23-ಅಕ್ರಮವಾಗಿ ಅಮೋನಿಯಂ ನೈಟ್ರೇಟ್ ಶೇಖರಿಸಿ ಸಾಗಿಸುತ್ತಿದ್ದ ಇಬ್ಬರನ್ನು ಬಾಗಲಕೋಟೆ ಜಿಲ್ಲಾ ಅಪರಾಧ ಪತ್ತೆ ವಿಶೇಷ ದಳದ ಪೊಲೀಸರು ಬಂಧಿಸಿದ್ದಾರೆ.ಜಿಲ್ಲೆಯ ಬಾದಾಮಿ ತಾಲೂಕು ಶಿವಪುರ ಗ್ರಾಮದ ಬಳಿ ಗೂಡ್ಸ್ ವಾಹನವೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ಸುಮಾರು 50 ಕೆಜಿ ತೂಕದ 70 ಚೀಲ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಳ್ಳಲಾಗಿದೆ.ಸಿಡಿ ಮದ್ದುಗಳನ್ನು ತಯಾರಿಸಲು ಈ ರಸಾಯನಿಕವನ್ನು ಬಳಸಲಾಗುತ್ತದೆ. ಗಣಿಗಾರಿಕೆಗಾಗಿ ಕೆಲವರು ಇದನ್ನು ಪರವಾನಗಿ ಪಡೆದು ಖರೀದಿಸುತ್ತಾರೆ. ಆದರೆ ಪ್ರಸ್ತುತ ವಶಪಡಿಸಿಕೊಂಡಿರುವ 3 ಟನ್‍ಗೂ ಹೆಚ್ಚು ಈ ಮಾಲನ್ನು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.ಬಾದಾಮಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin