ಅಕ್ರಮವಾಗಿ ಸಾಗಿಸುತ್ತಿದ್ದ 10 ಟನ್ ರಾಗಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

Ragi

ಬೇಲೂರು,ಅ.16- ಅಕ್ರಮವಾಗಿ ರಾಗಿ ಚೀಲಗಳನ್ನು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು, ರಾಗಿ ತುಂಬಿದ್ದ ಚೀಲಗಳನ್ನು ಅಹಾರ ನಿಗಮದ ಸುಪರ್ದಿಗೆ ವಹಿಸಿ ಪ್ರಕರಣ ದಾಖಲಿಸಿರುವ ಘಟನೆ ಬೇಲೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೆಹರು ನಗರದ ಬೀಟ್‍ನಲ್ಲಿದ್ದ ಪೊಲೀಸರಿಗೆ ಮೂಡಿಗೆರೆ ಕಡೆಯಿಂದ ಲಾರಿಯೊಂದರಲ್ಲಿ ಪಡಿತರದಾರರಿಗೆ ವಿತರಿಸುವ 10 ಟನ್ ಅನ್ನಭಾಗ್ಯ ಯೋಜನೆಯ ರಾಗಿ ಚೀಲಗಳನ್ನು ಅಕ್ರಮವಾಗಿ ತುಂಬಿಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಲಾರಿಯನ್ನು ತಡೆದು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಲಾರಿಯಲ್ಲಿ ಅಕ್ರಮವಾಗಿ ತುಂಬಿರುವ 10 ಟನ್ ರಾಗಿ ಚೀಲಗಳಿಗೆ ಯಾವುದೆ ದಾಖಲೆಗಳು ಸಹ ಇಲ್ಲದೇ ರಾಗಿ ತುಂಬಿದ್ದ ಲಾರಿ ಮತ್ತು ಲಾರಿ ಚಾಲಕನನ್ನು ವಶಕ್ಕೆ ಪಡೆದು, 10 ಟನ್ ರಾಗಿ ಚೀಲಗಳನ್ನು ಸರ್ಕಾರದ ಅಹಾರ ನಿಗಮದ ಅಧಿಕಾರಿಗಳ ಸುಪರ್ದಿಗೆ ವಹಿಸಿ, ಲಾರಿ ಮತ್ತು ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin