ಅಕ್ರಮ ಗ್ಯಾಸ್ ರೀಫಿಲಿಂಗ್ : ಒಬ್ಬ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಏ.22- ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್‍ನಲ್ಲಿ ಪರವಾನಿಗೆ ರಹಿತವಾಗಿ ಗ್ಯಾಸ್ ರೀಫಿಲಿಂಗ್ ಅಕ್ರಮವಾಗಿ ಮಾಡುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೆ.ಎನ್. ಮೂರ್ತಿ ಬಂಧಿತ ಆರೋಪಿಯಾಗಿದ್ದು, ಎಚ್ ಕ್ರಾಸ್‍ನ ಎಸ್‍ಎಲ್‍ಎನ್ ಲಾಡ್ಜ್ ಹಿಂಭಾಗದ ಮನೆಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ರಿಫೀಲಿಂಗ್ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಂಡೇನ್ ಕಂಪನಿಯ 7 ತುಂಬಿದ ಸಿಲಿಂಡರ್, 8 ಖಾಲಿ ಸಿಲಿಂಡರ್, ಭಾರತ್ ಗ್ಯಾಸ್ ಕಂಪೆನಿಯ 1 ಸಿಲಿಂಡರ್, ಆಟೋಗೆ ಅಳವಡಿಸುವ 5 ಕೆಜಿ ಸಾಮಥ್ರ್ಯದ 4 ಖಾಲಿ ಸಿಲಿಂಡರ್, ಲೈಟ್‍ಗೆ ಅಳವಡಿಸುವ 2 ಸಣ್ಣ ಖಾಲಿ ಸಿಲಿಂಡರ್, ರೀ ಫಿಲ್ಲಿಂಗ್ ಯಂತ್ರ ಸೇರಿದಂತೆ ಇತರೆ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin