ಅಕ್ರಮ ಪ್ಲಾಸ್ಟಿಕ್ ದಾಸ್ತಾನು ವಶ

ಈ ಸುದ್ದಿಯನ್ನು ಶೇರ್ ಮಾಡಿ

plastic

ಬೇಲೂರು, ನ.25- ಪಟ್ಟಣದಲ್ಲಿ ಕದ್ದು ಮುಚ್ಚಿ ಪ್ಲಾಸ್ಟಿಕ್ ಬಳಸುತ್ತಿರುವ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ಲಾಸ್ಟಿಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ಮುದ್ದಮ್ಮ ಹೇಳಿದರು. ಅಕ್ರಮವಾಗಿ ಪ್ಲಾಸ್ಟಿಕ್ ಮಾರಾಟ ಮಾಡಲು ಪಟ್ಟಣದ ಗೋದಾಮೊಂದಕ್ಕೆ ಲಾರಿಯಿಂದ ಇಳಿಸುತಿದ್ದ ಪ್ಲಾಸ್ಟಿಕ್‍ಗಳನ್ನು ವಶಕ್ಕೆ ಪಡೆದು ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯ 23 ವಾರ್ಡಗಳಲ್ಲಿ ಪ್ರತಿ ದಿನ 4 ಟನ್ ಕಸ ಸಂಗ್ರಹವಾಗುತ್ತದೆ, ಈ ಕಸದಲ್ಲಿ ಶೇ.50ರಷ್ಟು ಭಾಗ ಪ್ಲಾಸ್ಟಿಕ್ ಇರುತ್ತದೆ. ಆದ್ದರಿಂದ ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ.

ಯಾರು ಅಕ್ರಮವಾಗಿ ಪ್ಲಾಸ್ಟಿಕ್ ಬಳಕೆ ಮಾಡುತಾರೋ ಅಂತವರಿಗೆ 1 ಸಾವಿರದಿಂದ 2 ಲಕ್ಷದ ತನಕ ದಂಡ ವಿಧಿಸುವ ಅವಕಾಶವಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರೂ ಸಹ ಕದ್ದುಮುಚ್ಚಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ. ಆದರೆ ಪ್ಲಾಸ್ಟಿಕ್ ಮಾರಾಟಕ್ಕೆ ತಂದು ಕೊಡುವ ಬಗ್ಗೆ ಪುರಸಭೆಗೆ ಮಾಹಿತಿ ಬಂದ ಕಾರಣ ನಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ 40 ಸಾವಿರ ರೂ.ಗಳ ಪ್ಲಾಸ್ಟಿಕ್ ಬಾಕ್ಸ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್ ಬಳಸಿದ್ದು ಕಂಡು ಬಂದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದರು. ಪುರಸಭೆ ಆರೋಗ್ಯ ನೀರಕ್ಷಕ ವೆಂಕಟೇಶ್, ಸಿಬ್ಬಂದಿಗಳಾದ ನಾಗರಾಜು ಸಿಬ್ಬಂದಿಗಳಿದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin