ಅಕ್ರಮ ಫಿಲ್ಟರ್ ಮರಳು ತಯಾರಿಕೆ ಅಡ್ಡೆ ಮೇಲೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಸೂಲಿಬೆಲೆ, ಡಿ.26- ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಫಿಲ್ಟರ್ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ ಹೊಂಡಗಳನ್ನು ನಾಶ ಮಾಡಿ, ಲಾರಿ ಹಾಗೂ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ.ಹೊಸಕೋಟೆ ತಾಲೂಕು ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಲುನರಸಾಪುರ, ಹೆತ್ತಕ್ಕಿ, ಕೊಂಡ್ರಹಳ್ಳಿ, ಓಬಳಹಳ್ಳಿ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಅಕ್ರಮವಾಗಿ ಫಿಲ್ಟರ್ ಮರಳು ತಯಾರಿಕೆ ಅಡ್ಡೆಗಳನ್ನು ನಡೆಸಲಾಗುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಡಿವೈಎಸ್ಪಿ ವೆಂಕಟೇಶ್,ಸಿಪಿಐ ಶ್ರೀಕಂಠ ಹಾಗೂ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿ ಜೆಸಿಬಿ ಯಂತ್ರಗಳಿಂದ ಮರಳು ಅಡ್ಡೆಗಳನ್ನು ನಾಶ ಮಾಡಲಾಯಿತು.ಅಲ್ಲದೆ ಮರಳು ತಯಾರಿಕೆ ಬಳಕೆ ಮಾಡುತ್ತಿದ್ದ ಸಾಮಾಗ್ರಿಗಳನ್ನು ಜಪ್ತಿ ಮಾಡಿದರು.ಸುಮಾರು 50 ಅಡ್ಡೆಗಳನ್ನು ನಾಶ ಮಾಡಿದ್ದು, ಪೊಲೀಸರನ್ನು ಕಂಡು ಮರಳು ದಂಧೆಕೋರರು ಪರಾರಿಯಾಗಿದ್ದರು.

ಮಾಗ್ರಿಗಳನ್ನು ನಾಶ ಮಾಡಿ, ಹೊಂಡಗಳನ್ನು ಕ್ಲೀನ್ ಮಾಡಿ ಬಂದಿದ್ದ ಪೊಲೀಸರಿಗೆ ಭಾನುವಾರ ಮತ್ತೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಒಂದು ಟ್ರ್ಯಾಕ್ಟರ್ ಸಿಕ್ಕಿ ಬಿದ್ದಿದ್ದು, ಇವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ನಂದಗುಡಿಪೊಲೀಸರು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin