ಅಕ್ರಮ ಫಿಲ್ಟರ್ ಮರಳು ದಂಧೆ : ಅಪ್ಪ ಮಗನ ವಶ

ಈ ಸುದ್ದಿಯನ್ನು ಶೇರ್ ಮಾಡಿ

t--narasipura

ತಿ.ನರಸೀಪುರ, ಸೆ.26- ಆಕ್ರಮ ಮರಳು ಫಿಲ್ಟರ್ ಯಾರ್ಡ್ ಮೇಲೆ ಧಿಡೀರ್ ದಾಳಿ ನಡೆಸಿದ ಪಟ್ಟಣ ಪೊಲೀಸರು ಮರಳು ಧಂದೆಯಲ್ಲಿ ತೊಡಗಿದ್ದ ತಂದೆ ಹಾಗೂ ಮಗನನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.ತಾಲ್ಲೂಕಿನ ಹುಣಸೂರು ಗ್ರಾಮದಲ್ಲಿ ಮರಳು ಫಿಲ್ಟರ್ ದಂಧೆಯಲ್ಲಿ ತೊಡಗಿದ್ದ ವಿ.ಪಿ.ನಾಯಕ್ ಹಾಗೂ ಆತನ ಪುತ್ರನೇ ಬಂಧಿತ ಆರೋಪಿಗಳು.ಫಿಲ್ಟರ್ ಮರಳು ದಂಧೆ ನಡೆಸಲು ಪರವಾನಗಿ ಇರುವ ಬಗ್ಗೆ ಖಚಿತ ಪಡಿಸುವಂತೆ ಬಂಧಿತರಿಗೆ ಪೊಲೀಸರು ತಾಕೀತು ಮಾಡಿದ್ದಾರೆ. ಪರ್ತಕರ್ತರು ಮರಳು ಫಿಲ್ಟರ್ ಅಡ್ಡೆಗೆ ಭೇಟಿಯಾಗಿ ಪೊಟೋ ತೆಗೆಯಲು ಮುಂದಾದಾಗ ವಿ.ಪಿ.ನಾಯಕ್‍ರವರ ಪುತ್ರ ಪರ್ತಕರ್ತರಿಂದ ಕ್ಯಾಮರಾ ಕಸಿದು ಹಲ್ಲೆಗೆ ಮುಂದಾಗಿದ್ದನು.

ನಂತರ ಪರ್ತಕರ್ತರು ಪಟ್ಟಣ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಎಂ.ರವಿಶಂಕರ್‍ರವರಿಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ಧಾವಿಸಿದ ಸಬ್‍ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿ ವರ್ಗ ಮರಳು ಫಿಲ್ಟರ್ ಅಡ್ಡೆಯನ್ನು ಪರಿಶೀಲಿಸಿ ಸೂಕ್ತ ದಾಖಲೆಗಳಿಲ್ಲದ ಕಾರಣ ತಂದೆ ಮಕ್ಕಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ಈತ ಕಳೆದ ವರ್ಷ ಸಹ ಕೆಂಡನಕೊಪ್ಪಲು ಗ್ರಾಮದ ಬೀಕ್ಷೇಶ್ವರ ದೇವಸ್ಥಾನ ಬಳಿ ಆಕ್ರಮವಾಗಿ ನದಿಯಿಂದ ಮರಳು ತೆಗೆದು ಫಿಲ್ಟರ್ ಮಾಡಿ ಸಾಗಿಸುತ್ತಿದ್ದ ವೇಳೆಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಸ್ವಲ್ಪದಿನಗಳ ಬಳಿಕ ಹುಣಸೂರಿನ ತನ್ನದೇ ಜಮೀನಿನಲ್ಲಿ ಮತ್ತೇ ಆಕ್ರಮ ಮರಳು ಫಿಲ್ಟರ್ ಮಾಡಿ ತನ್ನ ಚಾಳಿ ಮುಂದುವರೆಸಿದ್ದ. ಮರಳು ಫಿಲ್ಟರ್ ಮಾಡಲು ಲೋಕೋಪಯೋಗಿ, ಗಣಿ ಮತ್ತೂ ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಪರವಾನಗಿ ಪಡೆದಿರುವುದಾಗಿ ಸುಳ್ಳು ಮಾಹಿತಿ ನೀಡಿ ಧಂದೆ ನಡೆಸುತ್ತಿದ್ದ.ಕಾರ್ಯಾಚರಣೆಯಲ್ಲಿ ಪಟ್ಟಣ ಪೊಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರವಿಶಂಕರ್ ಸಿಬ್ಬಂದಿಗಳಾದ ಸಿದ್ದಪ್ಪಾಜಿ, ವೆಂಕಟೇಶ್, ಚರಣ್, ಶಂಕರ್, ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin