ಅಕ್ರಮ ಬಹಿರಂಗಕ್ಕೆ ಹೆದರಿ ನೋಟ್ ಬ್ಯಾನ್‍ಗೆ ಕೇಜ್ರಿವಾಲ್ ವಿರೋಧ ವ್ಯಕ್ತಪಡಿಸಿದ್ದರು :ಮಿಶ್ರಾ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

kejriwal
ನವದೆಹಲಿ, ಮೇ 10-ತಾವು ನಡೆಸುತ್ತಿದ್ದ ಭಾರೀ ಹಣ ದುರ್ವವ್ಯಹಾರಗಳು ಹಳಿ ತಪ್ಪುತ್ತವೆ ಎಂಬ ಭಯದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೋಟು ರದ್ದತಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು ಎಂದು ಉಚ್ಛಾಟಿತ ಸಚಿವ ಕಪಿಲ್ ಮಿಶ್ರಾ ಆರೋಪಿಸಿದ್ದಾರೆ. ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಎಎಪಿ ನಾಯಕನ ಮೇಲೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ ಅವರು, ಕೇಜ್ರಿವಾಲ್ ಮೂಗಿನ ತುದಿಯಲ್ಲೇ ಭಾರೀ ಭ್ರಷ್ಟಾಚಾರ ನಡೆದಿದೆ. ಬೋಗಸ್ ಕಂಪನಿಗಳಿಗೆ ಅಕ್ರಮವಾಗಿ ಪಕ್ಷಕ್ಕೆ ದೇಣಿಗೆ ಸ್ವೀಕೃತವಾಗಿವೆ ಎಂದು ದೂರಿದರು. ಕೇಜ್ರಿವಾಲ್‍ರ ಕೊರಳ ಪಟ್ಟಿ ನನ್ನ ಕೈಯಲ್ಲಿದೆ. ನಾನು ಅವರನ್ನು ತಿಹಾರ್ ಜೈಲಿಗೆ ಅಟ್ಟುವುದು ಖಚಿತ ಎಂದು ಮಿಶ್ರಾ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin