ಅಕ್ರಮ ಭೂ ಒತ್ತುವರಿದಾರರ ವಿರುದ್ಧ ಸಿಡಿದೆದ್ದ ಎಸಿ

ಈ ಸುದ್ದಿಯನ್ನು ಶೇರ್ ಮಾಡಿ

huliyar

ಹುಳಿಯಾರು, ಅ.4- ಸಾಗುವಳಿ ನೆಪದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅನಧಿಕೃತವಾಗಿ ಆಕ್ರಮಿಸಿಕೊಂಡವರ ವಿರುದ್ಧ ಉಪವಿಭಾಗಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ ಸಿಡಿದೆದ್ದಿದ್ದಾರೆ. ಹುಳಿಯಾರು ಸಮೀಪದ ಗೌಡಗೆರೆ ಸರ್ವೆ ನಂಬರ್ 20 ರಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ 2 ಮನೆಗಳನ್ನು ಮುಲಾಜಿಲ್ಲದೆ ಸೀಝ್ ಮಾಡಿದ್ದಾರೆ. ಯಳನಾಡು ಶ್ರೀ ಸಿದ್ಧರಾಮೇಶ್ವರಸ್ವಾಮಿ ದಸರಾ ಜಾತ್ರಾಮಹೋತ್ಸವದ ಪೂರ್ವ ಭಾವಿ ಸಭೆಗೆ ತೆರಳುವಾಗಿ ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ ಗೋಮಾಳದಲ್ಲಿ ಅಕ್ರಮವಾಗಿ ಭೂ ಒತ್ತುವರಿ ಮಾಡಿರುವ ವಿಷಯ ತಿಳಿದು ತಹಸೀಲ್ದಾರ್ ಗಂಗೇಶ್ ಅವರೊಂದಿಗೆ ಖುದ್ದು ಭೇಟಿ ನೀಡಿ ವಾಸ್ತು ಸ್ಥಿತಿ ಅರಿತು ಒತ್ತುವರಿದಾರರು ಹಾಗೂ ತಮ್ಮ ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾದರು.

ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿರುವ ಬಗ್ಗೆ ಆಕ್ರೋಶಗೊಂಡ ಪ್ರಜ್ಞಾ ಅಮ್ಮೆಂಬಳ್ ಅವರು ನಿಂತಲ್ಲೇ ಮನೆ ಖಾಲಿ ಮಾಡಿಸಿ ಹೊಸ ಬೀಗ ತರಿಸಿ 2 ಮನೆಗಳನ್ನು ಸೀಝ್ ಮಾಡಿದರು. ಗೋಮಾಳದಲ್ಲಿ ತೆಂಗಿನ ಸಸಿ ನೆಟ್ಟಿದ್ದು, ತೆಂಗಿನ ಸಸಿ ಕೀಳದಿದ್ದರೆ ತಾವೇ ಕೀಳಿಸಿ ತಗಲಿದ ಖರ್ಚನ್ನು ಲ್ಯಾಂಡ್ ರೆವಿನ್ಯೂ ಎಂದು ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಿದರು.ಸುಳ್ಳು ವರದಿ ಕೊಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್, ಆರ್‍ಐ ಅವರಿಗೆ ಎಚ್ಚರಿಕೆ ನೀಡಿದರು.

 

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin