ಅಕ್ರಮ ಮರಳು ಗಣಿಗಾರಿಕೆ : ಮೂರು ಟ್ರ್ಯಾಕ್ಟರ್ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

arrested-2

ಚನ್ನಪಟ್ಟಣ, ಆ.16- ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಾಣಿ ನಡೆಸುತ್ತಿದ್ದ ಮೂರು ಟ್ರ್ಯಾಕ್ಟರ್‍ಗಳನ್ನು ಅಕ್ಕೂರು ಪೂಲೀಸರು ವಶಪಡಿಸಿಕೊಂಡಿದ್ದಾರೆ.ತಾಲ್ಲೂಕಿನ ಮದಾಪುರ ಗ್ರಾಮದಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ಸದಾನಂದ ಹಾಗೂ ಸಿಬ್ಬಂದಿಗಳಾದ ಸುನೀಲ್, ಕನಕರೆಡ್ಡಿ, ಪಾಂಡು ದಾಳಿ ಮಾಡಿ ಮಾದಾಪುರ ಬಳಿಯ ಕಣ್ವನದಿ ಸರಹದ್ದಿನಲ್ಲಿ ಮರಳು ತುಂಬಿಕೊಂಡು ಸಾಗಾಣಿಕೆ ನಡೆಸುತ್ತಿದ್ದ ಟ್ರಾಕ್ಟರ್‍ಗಳನ್ನು ವಶಕ್ಕೆ ಪಡೆದಿದ್ದಾರೆ.ಗ್ರಾಮದ ದಾಸೇಗೌಡ, ನಾಯಿರಮೇಶ್, ಚಿನ್ನಮುತ್ತ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin