ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿಗಳ ಮುಖಾಮುಖಿ ಡಿಕ್ಕಿ, ನಾಲ್ವರು ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

tipper

ಬೇಲೂರು, ಮಾ.6- ಅಕ್ರಮವಾಗಿ ಮರಳು ತುಂಬಿಕೊಂಡು ಅತಿ ವೇಗವಾಗಿ ಚಲಿಸುತಿದ್ದ ಟಿಪ್ಪರ್ ಲಾರಿಯೊಂದು ಟಿಪ್ಪರ್ ಲಾರಿ ಎದುರಿಗೆ ಬರುತ್ತಿದ್ದ ಮತ್ತೊಂದು ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.ತಾಲೂಕಿನ ಕೋನೇರ್ಲು ಗ್ರಾಮದ ಸಮೀಪ ತಡರಾತ್ರಿ 2 ಗಂಟೆ ಸಮಯದಲ್ಲಿ ಅಕ್ರಮವಾಗಿ ಯಾವುದೇ ಪರ್ಮಿಟ್ ಇಲ್ಲದೆ ಮರಳುನ್ನು ತುಂಬಿಕೊಂಡು ಮೂಡಿಗೆರೆ ರಸ್ತೆಯಲ್ಲಿ ಬೇಲೂರು ಕಡೆಗೆ ವೇಗವಾಗಿ ಹೋಗುತ್ತಿದ್ದ ಟಿಪ್ಪರ್ ಲಾರಿ ಎದುರಿನಿಂದ ಬರುತಿದ್ದ ಮತ್ತೊಂದು ಖಾಲಿ ಟಿಪ್ಪರ್ ಲಾರಿ ನಡುವೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ.

ಡಿಕ್ಕಿಯಾದ ರಭಸಕ್ಕೆ ಖಾಲಿ ಲಾರಿಯೂ ಚಾಲಕನ ನಿಯಂತ್ರಣಕ್ಕೆ ಸಿಗದೆ, ಸುಮಾರು 20ಕ್ಕೂ ಹೆಚ್ಚು ಅಡಿ ದೂರಕ್ಕೆ ಹಾರಿ ಮಗುಚಿ ಬಿದ್ದು ಜಖಂಗೊಂಡಿದೆ. ಈ ಟಿಪ್ಪರ್ ಲಾರಿಯಲ್ಲಿದ್ದ ಚಾಲಕ ಮಂಜುನಾಥ್ ಹಾಗೂ ಕಂಡಕ್ಟರ್ ಇರ್ಷಾದ್ ಎಂಬುವವರಿಗೆ ಗಂಭೀರವಾದ ಗಾಯಗಳಾಗಿದ್ದು, ಮರಳು ತುಂಬಿದ್ದ ಲಾರಿಯಲ್ಲಿದ್ದ ಮತ್ತಿಬ್ಬರಿಗೂ ಹೆಚ್ಚಿನ ಗಾಯಗಳಾಗಿ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.ಈ ಅಪಘಾತಕ್ಕೆ ಕಾರಣವಾದ ಮರಳು ತುಂಬಿದ್ದ ಟಿಪ್ಪರ್ ಲಾರಿಯನ್ನು ಚಾಲನೆ ಮಾಡುತಿದ್ದ ನವೀನ್ ಮತ್ತು ಮಾಲೀಕನ ವಿರುದ್ಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin