ಅಕ್ರಮ ಮರಳು ಸಾಗಾಣಿಕೆದಾರರಿಂದ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

illigal-sand
ದಾವಣಗೆರೆ, ಫೆ.9-ಅರಣ್ಯದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಮುಂದಾದ ಅರಣ್ಯ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಗಳೂರು ತಾಲೂಕಿನ ಕ್ಯಾಸೇನಹಳ್ಳಿ ಬಳಿಯ ದೇವಿಪುರ ಅರಣ್ಯಪ್ರದೇಶದಲ್ಲಿ ನಡೆದಿದೆ. ದೇವಿಪುರ ಅರಣ್ಯ ಪ್ರದೇಶದಲ್ಲಿ ದಂಧೆಕೋರರು ಅಕ್ರಮವಾಗಿ ಟ್ರ್ಯಾಕ್ಟರ್‍ಗಳಿಗೆ ಮರಳು ತುಂಬುತ್ತಿದ್ದು, ಗಸ್ತಿನಲ್ಲಿದ್ದ ಸಿಬ್ಬಂದಿಗಳಾದ ಅರಣ್ಯ ರಕ್ಷಕ ಶಿವಾರೆಡ್ಡಿ, ವಾಹನ ಚಾಲಕ ಚಂದ್ರು, ಅರಣ್ಯ ವೀಕ್ಷಕ ಬೋರಯ್ಯ, ಹನುಮಂತಪ್ಪ ಅವರು ಅಕ್ರಮ ತಡೆಯಲು ಮುಂದಾದಾಗ 20 ಕ್ಕೂ ಹೆಚ್ಚು ಮಂದಿ ಮರಳು ಸಾಗಾಣಿಕೆದಾರರ ಗುಂಪು ಇವರ ಮೇಲೆ ಹಲ್ಲೆ ನಡೆಸಿ ಟ್ರ್ಯಾಕ್ಟರ್ ತೆಗೆದುಕೊಂಡು ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಜಗಳೂರು ಪೆÇಲೀಸ್ ಠಾಣೆಯಲ್ಲಿ ಓಬಳೇಶ್, ಪಾಪಣ್ಣ, ಬೆಳ್ಳಿ ನಾಗರಾಜ, ಮಹಂತೇಶ, ಗುರುಸ್ವಾಮಿ, ಹನುಮಂತ, ರಂಗಪ್ಪ ಎಂಬುವರ ಮೇಲೆ ದೂರು ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರಣ್ಯ ಸಿಬ್ಬಂದಿಗಳ ಆರೋಗ್ಯವನ್ನು ಹಿರಿಯ ಅರಣ್ಯಾಧಿಕಾರಿಗಳು ವಿಚಾರಿಸಿದರು.

Facebook Comments

Sri Raghav

Admin