ಅಕ್ರಮ ಸಂಬಂಧಕ್ಕೆ ಒಪ್ಪದವಳ ಕತ್ತುಕೊಯ್ದು ತಾನೂ ನೇಣು ಬಿಗಿದುಕೊಂಡ…!

ಈ ಸುದ್ದಿಯನ್ನು ಶೇರ್ ಮಾಡಿ

 

Murderಮಾಗಡಿ,ಆ.31- ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆಯನ್ನು, ಆಕೆಯ ಮನೆಗೆ ನುಗ್ಗಿ ಕತ್ತು ಕೊಯ್ದು ಕೊಲೆ ಮಾಡಿದ ವ್ಯಕ್ತಿ ತಾನೂ ಕೂಡ ಅಲ್ಲೇ ನೇಣು ಹಾಕಿಕೊಂಡಿರುವ ಭೀಕರ ಘಟನೆ ಕುದೂರಿನಲ್ಲಿ ನಡೆದಿದೆ.   ಕುದೂರಮ್ಮ ದೇವಾಲಯದ ಹಿಂಭಾಗದ ಮನೆಯಲ್ಲಿ ಕಳೆದ ರಾತ್ರಿ ಈ ದುರಂತ ನಡೆದಿದೆ.   ಮೃತ ಮಹಿಳೆಯನ್ನು ಹೇಮಲತಾ(32) ಎಂದು ತಿಳಿದುಬಂದಿದ್ದು, ಈಕೆಯನ್ನು ಕೊಲೆ ಮಾಡಿದ ವ್ಯಕ್ತಿ ಕೊಡಿಗೆಹಳ್ಳಿ ಕಾಲೋನಿಯ ಟೈಲರ್ ಕುಮಾರ(26) ಎಂದು ತಿಳಿದುಬಂದಿದೆ.

ಘಟನೆ ವಿವರ:

ಕಳೆದ 15 ವರ್ಷಗಳ ಹಿಂದೆಯೇ ವೀರಭದ್ರ ಎಂಬುವರನ್ನು ವಿವಾಹವಾಗಿದ್ದ ಹೇಮಲತಾ ಕಳೆದ 6 ವರ್ಷದಿಂದ ಕುದೂರಿನಲ್ಲಿ ನೆಲೆಸಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ.
ಕಳೆದ ಆರು ತಿಂಗಳ ಹಿಂದೆ ಹೇಮಲತಾ ಅವರು ರವಿಕೆ ಹೊಲಿಸುವ ಸಲುವಾಗಿ ಕುಮಾರನ ಅಂಗಡಿಗೆ ಹೋಗಿದ್ದಾಗ ಆತ ಅಸಭ್ಯವಾಗಿ ವರ್ತಿಸಿದ್ದ. ನಂತರದ ದಿನಗಳಲ್ಲಿ ಆಕೆಯನ್ನು ಪೀಡಿಸಲು ಮುಂದಾದ.   ಇದು ಊರ ಮುಖಂಡರಿಗೆ ತಿಳಿದ ನಂತರ ಕುಮಾರನಿಗೆ ಬುದ್ದಿವಾದ ಹೇಳಿ ವಿವಾಹಿತ ಮಹಿಳೆಯ ಸಹವಾಸಕ್ಕೆ ಹೋಗಬೇಡ ಎಂದು ಎಚ್ಚರಿಕೆ ಸಹ ನೀಡಿದ್ದರು. ಆದರೆ ಈ ಕಾಮುಕನಿಗೆ ಅದ್ಯಾವುದೂ ತಲೆಗೆ ಹೋಗಲಿಲ್ಲ.  ನಿನ್ನೆ ರಾತ್ರಿ 9.30ರ ಸಂದರ್ಭದಲ್ಲಿ ಏಕಾಏಕಿ ಹೇಮಲತಾ ಮನೆಗೆ ನುಗ್ಗಿದ ಕುಮಾರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ.

ನಂತರ ಆಕೆಯ ಕುತ್ತಿಗೆ ಸೀಳಿ, ಹೊಟ್ಟೆಗೂ ಇರಿದು ಬರ್ಬರವಾಗಿ ಹತ್ಯೆ ಮಾಡಿ ಆಕೆಯ ಸೀರೆಯಿಂದಲೇ ಛಾವಣಿಗೆ ನೇಣು ಹಾಕಿಕೊಂಡಿದ್ದಾನೆ. ವಿಚಿತ್ರವೆಂದರೆ ಮಕ್ಕಳು ಪಕ್ಕದ ಕೋಣೆಯಲ್ಲಿ ಓದಿಕೊಳ್ಳುತ್ತಿದ್ದರು. ಈ ಘಟನೆ ನಡೆದಾಗಲೂ ಅವರಿಗೆ ಏನೂ ಗೊತ್ತಾಗಲಿಲ್ಲ. ಮನೆ ಯಜಮಾನ ವೀರಭದ್ರ ರಾತ್ರಿ 10 ಗಂಟೆಗೆ ಬಂದು ನೋಡಿದಾಗ ಜರ್ಝರಿತನಾಗಿದ್ದಾನೆ.  ಮೂಲಗಳ ಪ್ರಕಾರ ಹೇಮಲತಾ ಅವರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಗ್ರಾಮದಲ್ಲಿ ಜನರನ್ನು ಬೆಚ್ಚಿ ಬೀಳಿಸಿದೆ.  ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ನಂದೀಶ್, ಸಬ್ಇನ್ಸ್ಪೆಕ್ಟರ್ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin