ಅಕ್ಷಯ್ ನ ಟಾಯ್ಲೆಟ್ ಲವ್ ಸ್ಟೋರಿ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

11

ಭಾರತೀಯ ಚಿತ್ರರಂಗದಲ್ಲಿ ಈಗ ವಿಭಿನ್ನ ಪ್ರೇಮಕಥೆಗಳ ಸಿನಿಮಾಗಳದ್ದೇ ರಾಜ್ಯಭಾರ. ಬಾಲಿವುಡ್‍ನಲ್ಲಿ ಹೊಸ ಪರಿಕಲ್ಪನೆಯ ಚಿತ್ರವೊಂದರ ಶೂಟಿಂಗ್ ಸದ್ದಿಲ್ಲದೇ ಆರಂಭವಾಗಿದೆ. ಈ ಚಿತ್ರದ ಹೆಸರು ಟಾಯ್ಲೆಟ್-ಎಕ್ ಪ್ರೇಮ್ ಕಥಾ. ಶೌಚಾಲಯದಲ್ಲಿ ಅರಳುವ ಪ್ರೇಮಕಥೆಯ ತಿರುಳು ಈ ಸಿನಿಮಾದಲ್ಲಿ ಇದೆಯಂತೆ. ಈ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಅಕ್ಷಯ್‍ಕುಮಾರ್ ಮತ್ತು ಉದಯೋನ್ಮುಖ ನಟಿ ಭೂಮಿ ಪೆಡ್ನೇಕರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಅಕ್ಷಯ್-ಭೂಮಿ ಶೌಚಾಲಯದ ಮುಂದೆ ನಿಂತಿರುವ ಫೋಟೊವನ್ನು ಅಕ್ಷಯ್ ಟ್ವೀಟರ್‍ನಲ್ಲಿ ಹಾಕಿದ್ದಾನೆ. ಚಿತ್ರದ ಹೆಸರು ಮತ್ತು ಫೋಟೊ ವಿಲಕ್ಷಣ ಎನಿಸಿದರೂ ಈ ಟೈಟಲ್ ಗಮನಸೆಳೆಯುತ್ತಿರುವುದಂತೂ ನಿಜ. ಇನ್ನೊಂದೆಡೆ ಭೂಮಿ ಸಹ ಇದೇ ಫೋಟೋ ಹಾಕಿ ಹೊಸ ಪ್ರಾಜೆಕ್ಟ್ ಬಗ್ಗೆ ಟ್ವೀಟ್ ಮಾಡಿದ್ದಾಳೆ. ಶ್ರೀ ನಾರಾಯಣ ಸಿಂಗ್ ನಿರ್ದೇಶಕ ನಿರ್ದೇಶಿಸುತ್ತಿರುವ ಈ ಸಿನಿಮಾ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಅಭಿಯಾನ ಆಧರಿಸಿದೆ. ಲವ್ ಸ್ಟೋರಿ ಮೂಲಕ ಸಾಮಾಜಿಕ ಸಂದೇಶ ನೀಡುವುದು ಈ ಚಿತ್ರತಂಡದ ಉದ್ದೇಶ. ಐಡಿಯಾ ಏನೋ ಸೂಪರ್ ಆಗಿದೆ. ಆದರೆ ಚಿತ್ರಪೇಮಿಗಳು ಇದನ್ನು ಯಾವ ರೀತಿ ಸ್ವೀಕರಿಸುತ್ತಾರೋ ಕಾದು ನೋಡಬೇಕು.

► Follow us on –  Facebook / Twitter  / Google+

Facebook Comments

Sri Raghav

Admin