ಅಖಿಲೇಶ್ ಪರಮಾಪ್ತ ಸಚಿವನ ಉಚ್ಛಾಟನೆ : ನಿಲ್ಲದ ಯಾದವೀ ಕಲಹ

ಈ ಸುದ್ದಿಯನ್ನು ಶೇರ್ ಮಾಡಿ

Akhilesh-Yadav
ಲಖನೌ, ಅ.26 –  ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಭುಗಿಲೆದ್ದಿರುವ ಯಾದವೀ ಕಲಹ ಕೊನೆಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಮುಖ್ಯಮಂತ್ರಿ ಅಖಿಲೇಶ್ ಯಾದವ್‍ರ ಪರಮಾಪ್ತ ಸಚಿವ ತೇಜ್ ನಾರಾಯಣ್ ಪಾಂಡೆ ಅಲಿಯಾಸ್ ಪವನ್ ಪಾಂಡೆ ಅವರನ್ನು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಶಿವಪಾಲ್ ಯಾದವ್ ಇಂದು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದ್ದಾರೆ. ಇದರೊಂದಿಗೆ ಪಕ್ಷದಲ್ಲಿನ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ. ಪಕ್ಷದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಆಶು ಮಲಿಕ್‍ರನ್ನು ಪವನ್ ಪಾಂಡೆ ಥಳಿಸಿದ ಆರೋಪದ ಮೇಲೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಶಿವಪಾಲ್ ತಿಳಿಸಿದ್ದಾರೆ.

ಪಕ್ಚದ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಅಶಿಸ್ತನ್ನು ಸಹಿಸುವುದಿಲ್ಲ. ಪಾಂಡೆಯವರನ್ನು ಸಂಪುಟದಿಂದಲೂ ವಜಾಗೊಳಿಸುವಂತೆ ಕೋರಿ ಅಖಿಲೇಶ್ ಅವರಿಗೆ ತಾವು ಪತ್ರ ಬರೆದಿರುವುದಾಗಿ ತಿಳಿಸಿದರು. ಸಮಾಜವಾದಿ ಪಕ್ಷದಲ್ಲಿ ಮತ್ತು ಮುಲಾಯಂ ಸಿಂಗ್ ಕುಟುಂಬದಲ್ಲಿ ವಿವಾದವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರವಾಗಿ ಹೇಳಿದರು. ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಶಿವಪಾಲ್‍ರ ಸ್ಪಷ್ಟೀಕರಣ ಗೊಂದಲಕಾರಿಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin