ಅಜರ್‍ನನ್ನು ಜನ ಕ್ಷಮಿಸಿಲ್ಲ : ಪ್ರಾಚಿ ದೇಸಾಯಿ

ಈ ಸುದ್ದಿಯನ್ನು ಶೇರ್ ಮಾಡಿ

azer

“ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮದ್ ಅಜರುದ್ದೀನ್‍ನನ್ನು ಜನ ಕ್ಷಮಿಸಿಲ್ಲ. ಇದೇ ಕಾರಣಕ್ಕಾಗಿ `ಅಜರ್’ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಗೋತಾ ಹೊಡೆದಿದೆ”. ಹೀಗೆ ಪ್ರತಿಕ್ರಿಯಿಸಿದ್ದಾಳೆ- ಅಜರ್ ಚಿತ್ರದ ನಾಯಕಿ ಹಾಗೂ ಬಾಲಿವುಡ್‍ನ ಬಿಂದಾಸ್ ಬೆಡಗಿ ಪ್ರಾಚಿ ದೇಸಾಯಿ.  ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹಮದ್ ಅಜರುದ್ದೀನ್ ಜೀವನ ಕಥೆ ಕುರಿತ `ಅಜರ್’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಅಜರ್ ಪಾತ್ರದಲ್ಲಿ ಹಾಗೂ ಪ್ರಾಚಿ ದೇಸಾಯಿ ಮೊದಲ ಪತ್ನಿಯಾಗಿ ನಟಿಸಿದ್ದಾರೆ.  ಹದಿನಾರು ವರ್ಷಗಳ ಹಿಂದೆ ಬಹಿರಂಗಗೊಂಡ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬಿಸಿಸಿಐ ಅಜರ್‍ಗೆ ಆಜೀವ ನಿಷೇಧ ವಿಧಿಸಿತ್ತು.

ಆದಾಗ್ಯೂ 2012ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ನಿಷೇಧವನ್ನು ತೆರವುಗೊಳಿಸಿತ್ತು.  `ಅಜರ್’ ಸಿನಿಮಾ ಫ್ಲಾಪ್ ಆದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಚಿ, ಕೆಲವೊಂದು ಸಂಗತಿಗಳು ನಮ್ಮ ಕೈ ಮೀರಿ ನಡೆಯುತ್ತವೆ. ಅದನ್ನು ನಾವು ಸಮಚಿತ್ತರಾಗಿ ಎದುರಿಸಬೇಕು. ಭಾರತದಲ್ಲಿ ಬಹುದೊಡ್ಡ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಅವರು ಮ್ಯಾಚ್ ಫಿಕ್ಸಿಂಗ್ ಹಗರಣ ಮರೆತಂತಿಲ್ಲ. ಅದರ ಪರಿಣಾಮ ಅಜರ್ ಚಿತ್ರದ ಮೇಲೆ ಬಿದ್ದಿದೆ ಎಂದು ಸಿನಿಮಾ ಸೋಲಿನ ಬಗ್ಗೆ ತನ್ನದೇ ಧಾಟಿಯಲ್ಲಿ ವಿಶ್ಲೇಷಿಸಿದ್ದಾಳೆ ಪ್ರಾಚಿ.

 

Facebook Comments

Sri Raghav

Admin