ಅಜಿತ್ ದೋವಲ್ ಅಮೆರಿಕ ಭೇಟಿ : ಭಯೋತ್ಪಾದನೆ ನಿಗ್ರಹ ಸಹಕಾರ ಬಲವರ್ಧನೆ

ಈ ಸುದ್ದಿಯನ್ನು ಶೇರ್ ಮಾಡಿ

Ajit-Doval

ವಾಷಿಂಗ್ಟನ್, ಮಾ.25 – ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಅಮೆರಿಕದ ಉನ್ನತಾಧಿಕಾರಿಗಳ ಭೇಟಿಯಿಂದ ಉಭಯ ದೇಶಗಳ ನಡುವೆ ಭಯೋತ್ಪಾದನೆ ನಿಗ್ರಹ ಸಹಕಾರ ಬಲವರ್ಧನೆಯಾಗುವ ನಿಟ್ಟಿನಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ. ಭಯೋತ್ಪಾದನೆ ನಿಗ್ರಹದಲ್ಲಿ ಭಾರತದೊಂದಿಗಿನ ಸಹಕಾರ ಮತ್ತಷ್ಟು ಬಲವರ್ಧನೆಯಾಗುವ ಮತ್ತು ಇನ್ನಷ್ಟು ವಿಸ್ತರಣೆಯಾಗಲಿದೆ ಎಂಬ ಭರವಸೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಮೆರಿಕ ಭೇಟಿ ವೇಳೆ ದೋವಲ್ ರಕ್ಷಣಾ ಕಾರ್ಯದರ್ಶಿ ಜನರಲ್ ಜೇಮ್ಸ್ ಮಟ್ಟಿಸ್, ಗೃಹ ಕಾರ್ಯದರ್ಶಿ ಜನರಲ್ ಜಾನ್ ಕೆಲ್ಲಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಎಚ್.ಆರ್. ಮ್ಯಾಕ್‍ಮಾಸ್ಟರ್ ಅವರೊಂದಿಗೆ ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದ್ದರು.
ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯಿಂದ ಎದುರಾಗುತ್ತಿರುವ ಸವಾಲುಗಳನ್ನು ಸಾಮೂಹಿಕವಾಗಿ ನಿಭಾಯಿಸಲು ಭಾರತ-ಅಮೆರಿಕ ಸಹಕಾರವನ್ನು ವಿಸ್ತರಿಸುವ ಮತ್ತು ಇನ್ನಷ್ಟ ಬಲಗೊಳಿಸುವ ವಿಚಾರ ಈ ಎಲ್ಲ ಸಭೆಗಳಲ್ಲಿ ಸಾಮಾನ್ಯವಾಗಿ ಚರ್ಚೆಗೆ ಬಂದ ವಿಷಯವಾಗಿತ್ತು.  ಅಮೆರಿಕ ಭೇಟಿ ವೇಳೆ ದೋವಲ್, ಸಶಸ್ತ್ರ ಸೇವೆಗಳ ಸಮಿತಿಯ ಅಧ್ಯಕ್ಷರೂ ಆದ ಸೆನೆಟರ್ ಜಾನ್ ಮ್ಯಾಕೈನ್ ಮತ್ತು ಬೇಹುಗಾರಿಕೆ ಕುರಿತ ಸಮಿತಿ ಅಧ್ಯಕ್ಷ ಸೆನೆಟರ್ ರಿಚರ್ಡ್ ಬರ್ರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin