ಅಜ್ಜಿಯರಿಗೂ ಕ್ಲಾಸ್..! ಮಕ್ಕಳ ಆರೈಕೆ ತರಬೇತಿಗಾಗಿ..!!

ಈ ಸುದ್ದಿಯನ್ನು ಶೇರ್ ಮಾಡಿ

amaz

ದಕ್ಷಿಣ ಕೊರಿಯಾದ ಅಜ್ಜಿಯಂದಿರಿಗೆ ಹೊಸ ಜವಾಬ್ದಾರಿಯ ಕೆಲಸವೊಂದು ಹೆಗಲ ಮೇಲೆ ಬಿದ್ದಿದೆ. ಮಗ-ಸೊಸೆ ಅಥವಾ ಮಗಳು-ಅಳಿಯ ಉದ್ಯೋಗಸ್ಥರಾಗಿರುವುದರಿಂದ ಮನೆ ಚಾಕರಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಜೊತೆಗೆ ಮೊಮ್ಮಕ್ಕಳ ಪಾಲನೆ ಪೊಷಣೆಯ ಹೊಣೆಯನ್ನೂ ಹೊರಬೇಕಾಗುತ್ತದೆ. ಇದಕ್ಕಾಗಿ ಅಲ್ಲಿನ ವಯೋವೃದ್ಧರು ಮಾರ್ಗೋಪಾಯವೊಂದನ್ನು ಕಂಡುಕೊಂಡಿದ್ದಾರೆ. ಮಕ್ಕಳನ್ನು ಹೊಂದಿದ ನಂತರ ತಮ್ಮ ಮಕ್ಕಳು-ಸೊಸೆಯದಿಂದರು ನೌಕರಿಗೆ ಹೋಗುವುದರಿಂದ ಹೆಚ್ಚು ವೃತ್ತಿಪರತೆಯಿಂದ ತಮ್ಮ ಮೊಮ್ಮಕ್ಕಳನ್ನು ನೋಡಿಕೊಳ್ಳಲು ಆಧುನಿಕ ಡೇ ಚೈಲ್ಡ್‍ಕೇರ್ ತರಗತಿಗಳಿಗೆ ದಕ್ಷಿಣ ಕೊರಿಯಾದ ಅಜ್ಜಿಯರು ಮೊರೆ ಹೋಗಿದ್ದಾರೆ. ವಯೋವೃದ್ಧರಿಗೆ ಮಕ್ಕಳ ಆರೈಕೆ ತರಗತಿಗಳ ಪರಿಕಲ್ಪನೆ 2013ಕ್ಕೆ ಮೊದಲು ವಿರಳವಾಗಿತ್ತು. ಆದರೆ ಇತ್ತೀಚಿಗೆ ಚೈಲ್ಡ್‍ಕೇರ್ ಕಾಸ್ಲುಗಳು ಜನಪ್ರಿಯವಾಗುತ್ತಿದೆ.

ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಮೊಮ್ಮಕ್ಕಳ ಪಾಲನೆ ಪೊಷಣೆಗಾಗಿ ಅಜ್ಜಿಯರಿಗೆ ತರಬೇತಿ ನೀಡುವ ತರಗತಿಗಳು ನಡೆಯುತ್ತಿವೆ. ಇಲ್ಲಿ ಆಧುನಿಕ ವಿಧಾನದಲ್ಲಿ ಮಕ್ಕಳ ಆರೈಕೆ ಕೌಶಲ್ಯಗಳು, ಶಿಶು ಅಂಗಮರ್ದನ, ಹಾಲುಣಿಸುವಿಕೆ ಮತ್ತು ಮಕ್ಕಳೊಂದಿಗೆ ಆಟವಾಡುವಿಕೆ-ಹೀಗೆ ವಿವಿಧ ರೀತಿಯ ತರಬೇತಿಗಳನ್ನು ವಯೋವೃದ್ದೆಯರಿಗೆ ನೀಡಲಾಗುತ್ತಿದೆ. ನನ್ನ ಮಗಳು ಮತ್ತು ಅಳಿಯ ಇಬ್ಬರೂ ಉದೋಗ್ಯಸ್ಥರು. ಹೀಗಾಗಿ ನನ್ನ ಮೊಮ್ಮಗುವನ್ನು ನಾನು ಪೊಷಿಸಬೇಕಿದೆ. ಇಲ್ಲಿ ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ನೀಡಲಾಗುತ್ತದೆ.

ನನ್ನ ವಯೋಮಾನದ ಜನರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇದು ತುಂಬಾ ಪ್ರಯೋಜನಕಾರಿ. ತರಗತಿಯಲ್ಲಿ ಹೊಸ ಮಾಹಿತಿಯನ್ನು ಒದಗಿಸಲಾಗುತ್ತಿದೆ ಮತ್ತು ನನ್ನ ಮೊಮ್ಮಗುವನ್ನು ಬೆಳೆಸಲು ತುಂಬಾ ಸಹಕಾರಿಯಾಗಿದೆ ಎನ್ನುತ್ತಾರೆ ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್‍ನ ಡೊಂಗ್‍ಜ್ಯಾಕ್ ಪಬ್ಲಿಕ್ ಹೆಲ್ತ್ ಸೆಂಟರ್‍ನಲ್ಲಿ ಚೈಲ್ಡ್‍ಕೇರ್ ಕ್ಲಾಸ್‍ಗೆ ಹೋಗುತ್ತಿರುವ 62 ವರ್ಷದ ಕಿಮ್ ಜೊಂಗ್-ಗ್ಯಾಬ್. ತಮ್ಮ ಮಕ್ಕಳನ್ನು ಆರೈಕೆ ಮಾಡಲು ತಮ್ಮ ವಯಸ್ಸಾದ ಪೊಷಕರಿಗೆ ದಕ್ಷಿಣ ಕೊರಿಯನ್ನರು ಹಣ ಪಾವತಿಸುತ್ತಿರುವ ಪರಿಪಾಠ ಅಸಾಮಾನ್ಯ ಸಂಗತಿ ಏನಲ್ಲ. ಈ ಸಂಖ್ಯೆ ದಿನೇ ದಿನೇ ಏರುತ್ತಿದೆ. ಪೂರ್ಣ ಪ್ರಮಾಣದ ಬೇಬಿ ಸಿಟ್ಟಿಂಗ್ ಅಥವಾ ಪ್ಲೇ ಹೋಮ್‍ಗಳಿಗೆ ನೀಡುತ್ತಿರುವಷ್ಟೇ ಹಣವನ್ನು ಮಕ್ಕಳ ಆರೈಕೆಯಲ್ಲಿ ವೃತ್ತಿಪರರಾಗಿರುವ ತಮ್ಮ ಪೊಷಕರಿಗೂ ಮಕ್ಕಳು ನೀಡುತ್ತಿದ್ದಾರೆ.

ಅಜ್ಜಿಯಂದಿರಿಗೆ ಮೊಮ್ಮಕ್ಕಳನ್ನು ನೋಡಿಕೊಳ್ಳಲು ಹಣ ಪಾವತಿ ಮಾಡಿದರೆ, ಅವರಿಗೆ ಒಂದು ಜವಾಬ್ದಾರಿ ಮತ್ತು ಕರ್ತವ್ಯದ ಭಾವನೆ ಉಂಟಾಗುತ್ತದೆ ಹಾಗೂ ಅವರು ತಮ್ಮ ಮೊಮ್ಮಕ್ಕಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳಲು ಗಮನಹರಿಸುತ್ತಾರೆ. ಅಲ್ಲದೇ, ಮಕ್ಕಳನ್ನು ಬೆಳೆಸುವ ಬಗ್ಗೆ ಯುವ ಪೊಷಕರೊಂದಿಗೆ ಒಂದು ಪೀಳಿಗೆ ಅಂತರದ ಭಾವನೆ ಅವರಲ್ಲಿ ಉಂಟಾಗಬಹುದು ಎಂದು ಸೂಕ್‍ಮ್ಯಯಂಗ್ ಮಹಿಳಾ ವಿಶ್ವವಿದ್ಯಾಲಯದ ಮಕ್ಕಳ ಕಲ್ಯಾಣ ಮತ್ತು ಅಧ್ಯಯನಗಳ ವಿಭಾಗದ ಪೊಫೆಸರ್ ಚುಂಗ್ ಶಾನಾ ವಿವರಿಸುತ್ತಾರೆ. ತಮ್ಮ ಮಕ್ಕಳನ್ನು ಬೆಳೆಸಿದಾಗ ಇದ್ದ ಸ್ಥಿತಿಗಿಂತ ಈಗ ಸಾಕಷ್ಟು ಬದಲಾವಣೆಯಾಗಿದೆ. ಹೀಗಾಗಿ ಆಧುನಿಕ ಡೇ ಚೈಲ್ಡ್ ಕೇರ್ ಬಗ್ಗೆ ಕಲಿಯಲು ತಾವು ತುಂಬಾ ಉತ್ಸುಕರಾಗಿದ್ದೇವೆ ಎಂದು ತಮ್ಮ ಮೊಮ್ಮಕ್ಕಳನ್ನು ಆರೈಕೆ ಮಾಡುವ ಹೊಣೆಗಾರಿಕೆಯ ಸವಾಲನ್ನು ಎದುರಿಸುತ್ತಿರುವ ಅಜ್ಜಿಯಂದಿರು ಹೇಳುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin