ಅಟೋಗಳಿಗೆ ದಾಖಲಾತಿ ಇಲ್ಲ : ಮೀಟರ್‍ಗಳೂ ಇಲ್ಲ!

ಈ ಸುದ್ದಿಯನ್ನು ಶೇರ್ ಮಾಡಿ

auto

ಚಿಂತಾಮಣಿ, ನ.24- ಕಳೆದ ಮೂರು ದಿನಗಳಿಂದ ನಗರದಾದ್ಯಂತ ಸುಗಮ ಸಂಚಾರಕ್ಕೆ ಕಡಿವಾಣ ಹಾಕಲು ನಗರ ಠಾಣೆ ಪೊಲೀಸರು ಶ್ರಮಿಸುತ್ತಿರುವುದನ್ನು ಶ್ಲಾಘಿಸಿರುವ ನಗರದ ಜನತೆ ನಗರದಲ್ಲಿ ಆಟೊಗಳ ಉಪಟಳ ಜಸ್ತಿಯಾಗಿದ್ದು, ಅದಕ್ಕೂ ಕಡಿವಾಣ ಹಾಕುವಂತೆ ಕೋರಿದ್ದಾರೆ. ನಗರದ ಅತ್ಯಂತ ಜನನಿಬಿಡ ಮತ್ತು ಅತಿ ಹೆಚ್ಚು ಸಾರ್ವಜನಿಕರು ಓಡಾಡುವ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಟೋಗಳ ಅಡ್ಡಿಯಾಗಿರುವುದರ ಜತೆಗೆ ಸೂಕ್ತ ದಾಖಲಾತಿಗಳಿಲ್ಲದೆ ಮತ್ತು ಅಜಾಗರೂಕತೆಯಿಂದ ವೇಗವಾಗಿ ಚಾಲನೆ ಮಾಡಿ ಅಪಘಾತಗಳಿಗೆ ಕಾರಣವಾಗುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಅಗ್ರಹಿಸಿದ್ದಾರೆ.

ಪ್ರತಿನಿತ್ಯ ಪ್ರಮುಖ ರಸ್ತೆಗಳ ಎರಡು ಬದಿಯಲ್ಲಿ ಅಟೋಗಳನ್ನು ನಿಲ್ಲಿಸಿಕೊಂಡು ಸುಗಮ ಸಂಚಾಕ್ಕೆ ತೊಂದರೆ ಕೊಡುವುದರ ಜತೆಗೆ ಜನರನ್ನು ಸಾಗಿಸುವ ಅಟೋಗಳು ಸರಕು-ಸಾಗಾಣಿಕೆ ವಾಹನಗಳಾಗಿ ಮಾರ್ಪಟ್ಟಿರುವುದು ಒಂದಡೆಯಾದರೆ ಮತ್ತೊಂದು ಕಡೆ ಜನರನ್ನು ಅಟೋಗಳಲ್ಲಿ ಕುರಿಗಳಂತೆ ತುಂಬಿಕೊಂಡು ಕರೆದೊಯ್ಯುತ್ತಿದ್ದರು ಎಂದು ನಗರವಾಸಿಗಳು ದೂರಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin